Thursday, April 3, 2025
Google search engine

Homeಅಪರಾಧವಿಶಾಖಪಟ್ಟಣಂ: ಮಂಗಳ ಮುಖಿ ಮೇಲೆ ಅತ್ಯಾಚಾರ ಮಾಡಿ ಬರ್ಬರ ಹತ್ಯೆ

ವಿಶಾಖಪಟ್ಟಣಂ: ಮಂಗಳ ಮುಖಿ ಮೇಲೆ ಅತ್ಯಾಚಾರ ಮಾಡಿ ಬರ್ಬರ ಹತ್ಯೆ

ವಿಶಾಖಪಟ್ಟಣಂ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ ನಡೆದಿದ್ದು, ಕಾಮುಕರು ಮಂಗಳಮುಖಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಆಂಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಮಂಗಳಮುಖಿಯನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಪೊಲೀಸರು ಅಪರಿಚಿತ ಶವವನ್ನು ಪತ್ತೆ ಮಾಡಿದ್ದಾರೆ. ತನಿಖೆ ನಡೆಸಿದಾಗ ಮಂಗಳಮುಖಿ ದೀಪಾ ಎಂದು ಗುರುತಿಸಲಾಗಿದೆ.

ದೀಪಾ ನಾಲ್ಕು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅನಕಪಲ್ಲಿ ಡಯಟ್ ಎಂಜಿನಿಯರಿಂಗ್ ಕಾಲೇಜಿನ ಬಳಿ ಇದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಎಂಟು ತಂಡಗಳು ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿವೆ. ಈ ಘಟನೆಯ ಬಗ್ಗೆ ವಿವರಗಳು ಇನ್ನೂ ತಿಳಿದುಬರಬೇಕಾಗಿದೆ.

RELATED ARTICLES
- Advertisment -
Google search engine

Most Popular