ಮೈಸೂರು: ಮೈಸೂರಿನಿಂದ ಅಯೋಧ್ಯೆಗೆ ಹೊರಡುತ್ತಿರುವ ಮೊದಲ ರೈಲಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಅಯೋಧ್ಯೆಗೆ ಹೊರಡುವ ರಾಮಭಕ್ತರಿಗೆ ಶ್ರೀರಾಮ ಮಂದಿರದ ದರ್ಶನದ ಪಾಸ್ ಗಳು ಶಾಲು ಹಾಗೂ ಅವರಿಗೆ ಒಂದು ತುಳಸಿ ಮಾಲೆಯ ಮಣಿಗಳನ್ನು ಹಾಕಿ ವಿಶ್ವ ಹಿಂದೂ ಪರಿಷತ್ ಮೈಸೂರು ವಿಭಾಗದಿಂದ ಬೀಳ್ಕೊಡುಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಷಡಕ್ಷರ ಸ್ವಾಮೀಜಿ, ಮುಡುಕನ ಪುರ, ವಿಹಿಂಪ ಮುಖಂಡರಾದಂತಹ ಸತೀಶ್, ಮಧುಶಂಕರ್, ಜ್ಯೋತಿ, ಡಾ. ಚಂದ್ರಶೇಖರ್, ಜಗದೀಶ್ ಹೆಬ್ಬಾರ್, ಅಂಬಿಕಾ , ಜಯಶ್ರೀ, ಲೋಕೇಶ್, ಡಾ. ಕೇಶವಮೂರ್ತಿ, ಪುನೀತ್ ಜಿ ಕೂಡ್ಲೂರು, ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದಾರೆ.