Sunday, April 20, 2025
Google search engine

Homeರಾಜ್ಯಸುದ್ದಿಜಾಲಭಾರತದ ಶಿಲ್ಪಕಲೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ : ಶ್ರೀನಿವಾಸ ಆಚಾರ್ಯ

ಭಾರತದ ಶಿಲ್ಪಕಲೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ : ಶ್ರೀನಿವಾಸ ಆಚಾರ್ಯ

ರಾಮನಗರ: ನಮ್ಮ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಪ್ರಾಚೀನ ಸ್ಮಾರಕಗಳು ಮತ್ತು ಮಾಹಲ್ಲುಗಳ ಪ್ರಮುಖ ಪಾತ್ರ ವಹಿಸುತ್ತವೆ, ಅಂತಹ ಸ್ಮಾರಕಗಳನ್ನು ನಿರ್ಮಿಸಿರುವ ನಮ್ಮ ಪೂರ್ವಿಕರ ಶ್ರಮ ಮತ್ತು ಸೃಜನಾತ್ಮಕ ಕಲೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಸಮುದಾಯದ ಮುಖಂಡರಾದ ಶ್ರೀನಿವಾಸ ಆಚಾರ್ಯ ಅವರು ಅಭಿಪ್ರಾಯಪಟ್ಟರು.

ಅವರು ಸೆ.೧೭ರ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಮನಗರದ ವಿಜಯನಗರ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಮುದಾಯವು ಹಿಂದಿನ ಕಾಲದಿಂದಲೂ ಐದು ಕಸುಬುಗಳನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿವೆ ಈ ಐದು ವೃತ್ತಿಗಳು ಮನುಷ್ಯನ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ವೃತ್ತಿಯಾಗಿವೆ. ಪುರಾಣಗಳ ಪ್ರಕಾರ ವಿಶ್ವಕರ್ಮರು ಇಡೀ ಪ್ರಪಂಚವನ್ನು ಸೃಷ್ಠಿಸಿದವರು. ರಾಮಾಯಾಣದಲ್ಲಿ ಬರುವ ಶ್ರೀಲಂಕಾ ಹಾಗೂ ಮಹಾಭಾರತದ ಬರುವ ಇಂದ್ರಪ್ರಸ್ಥ ಪ್ರದೇಶಗಳಲ್ಲಿ ಭವ್ಯ ಅರಮನೆಯನ್ನು ವಿಶ್ವಕರ್ಮರು ನಿರ್ಮಿಸಿದ್ದರು ನಾವು ಕಾಣಬಹುದು.ಜಗತ್ತಿನಲ್ಲಿ ಎಲ್ಲರನ್ನು ಹಾಗೂ ಎಲ್ಲವನ್ನೂ ಸೃಷ್ಠಿ ಮಾಡಿದವರು ವಿಶ್ವಕರ್ಮರು ಹಾಗೂ ಊರುಗಳಲ್ಲಿ ಗ್ರಾಮದೇವತೆಯನ್ನು ಸೃಷ್ಟಿಸಿದರು ವಿಶ್ವಕರ್ಮ ಸಮುದಾಯದವರು ಎಂದರು.


ಕರ್ನಾಟಕ ಸರ್ಕಾರ ೨೦೧೬ರಲ್ಲಿ ವಿಶ್ವಕರ್ಮ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು. ಇಂದಿನ ಆಧುನಿಕ ಇಂಜಿನಿಯರುಗಳು ಅಸಾಧ್ಯವೆನ್ನುವ ಅನೇಕ ರೀತಿಯ ಕಲೆಯನ್ನು ಬಹಳ ಹಿಂದೆಯೇ ನಮ್ಮ ದೇಶದಿಂದ ಇಡೀ ವಿಶ್ವಕ್ಕೆ ಪರಿಚಿಯಿಸಿದವರು. ವಿಶ್ವ ಸಂಸ್ಥೆಯ ವಿಶ್ವಪಾರಂಪರ್ಯ ಪಟ್ಟಿಗೆ ಸೇರಿರುವ ಅನೇಕ ಕಲ್ಲಿನ ಕೆತ್ತನೆಗಳು ಇಂದಿಗೂ ಪ್ರಪಂಚದ ಅತ್ಯುತ್ತಮ ಕಲೆಗೆ ನಿದರ್ಶನಗಳನ್ನು ಕಾಣಬಹುದು ಎಂದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಂಡಾಗಣದಿಂದ ವಿಜಯನಗರ ಕಾಳಿಕಾಂಬ ದೇವಸ್ಥಾನದವರೆಗೆ ಬೆಳ್ಳಿರಥದಲ್ಲಿ ದೇವರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯರವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದೇರ್ಶಕ ರಮೇಶ್‌ಬಾಬು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ ಕೆ.ಜೆ, ತಾಲ್ಲೂಕು ವ್ಶೆದ್ಯಾಧಿಕಾರಿ ಡಾ. ಉಮಾ, ಡಾ. ಮಧುಮತಿ ಸಾಹಿತಿ ಶೈಲಾಜ ಸಮುದಾಯದ ಮುಖಂಡರುಗಳಾದ ಪಿ.ಉಮೇಶ್, ರಾಧಕೃಷ್ಣ, ಮುತ್ತುರಾಜ್, ಶ್ರೀನಿವಾಸ್ ತಗಡಚಾರ್, ಲಿಂಗಚಾರ್, ಅಪ್ಪಾಜಿಚಾ, ಬಸವರಾಜಚಾರ್ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular