Friday, April 4, 2025
Google search engine

Homeರಾಜ್ಯಸುದ್ದಿಜಾಲಕೌಲನಹಳ್ಳಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಕೌಲನಹಳ್ಳಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ.

ಬೆಟ್ಟದಪುರ: ದೇಶದ ನಿರ್ಮಾಣ ವಿಚಾರದಲ್ಲಿ ಅನಾದಿ ಕಾಲದಿಂದಲ್ಲೂ ವಿಶ್ವಕರ್ಮದ ಸಮಾಜದವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕೌಲನಹಳ್ಳಿ ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಗೆಳೆಯರ ಬಳಗ ಹಾಗೂ ಗ್ರಾಮಸ್ಥರವತಿಯಿಂದ ಭಾನುವಾರ ಆಯೋಜಿಸಿದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಕಾಶ್ಮೀರದವರೆಗೆ ಅರಬಿ ಸಮುದ್ರದಿಂದ ಹಿಡಿದು ಬಂಗಾಳಕೊಲ್ಲಿಯವರೆಗೆ ಎಲ್ಲ ದೇವಸ್ಥಾನಗಳ ಮೂರ್ತಿಗಳನ್ನು ಸೃಷ್ಠಿಸಿದ ಶಿಲ್ಪಿಗಳು ವಿಶ್ವಕರ್ಮದವರು. ನಿಸ್ವಾರ್ಥ ಮನೋಭಾವದ ತ್ಯಾಗಮೂರ್ತಿಗಳಾಗಿದ್ದು, ಜನರ ಹಿತಸಂರಕ್ಷಣೆಗೆ ಸದಾ ಆಲೋಚಿಸುವ ಶಕ್ತಿ ಹೊಂದಿದ್ದಾರೆ ಎಂದರು.

ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಮಹೇಶ್ ಆಚಾರ್ಯ ಮಾತನಾಡಿ ನಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರ ಮಟ್ಟದಲ್ಲಿ ಒಂದು ಪ್ರಾಧಿಕಾರ ರಚನೆಯಾಗುವ ಮೂಲಕ ಇನ್ನಷ್ಟು ಸಹಕಾರ ಬೇಕಿದೆ. ಸೆ.28ರ ಶನಿವಾರ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಕೌಲನಹಳ್ಳಿ ಗ್ರಾಮವು ತಾಲೂಕಿನ ಗಡಿಗ್ರಾಮವಾಗಿದ್ದು, ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಸುಮಾರು ಹದಿನೈದು ಬೇಡಿಕೆಯುಳ್ಳ ಮನವಿ ಪತ್ರವನ್ನು ಗ್ರಾಮದ ನಿವೃತ್ತ ಶಿಕ್ಷಕ ಶಿವಣ್ಣ ನೇತೃತ್ವದಲ್ಲಿ ಗ್ರಾಮಸ್ಥರು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಗೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಉಪಾಧ್ಯಕ್ಷ ತಿರುನೀಲಕಂಠ, ಮಾಜಿ ಉಪಾಧ್ಯಕ್ಷ ಹೀರಣ್ಣಚಾರ್, ಪ್ರಧಾನ ಕಾರ್ಯದರ್ಶಿ ಬಿ.ಜಗದೀಶ್, ಗ್ರಾ.ಪಂ ಸದಸ್ಯ ಗೋವಿಂದಚಾರ್, ಗ್ರಾಮದ ಶ್ರೀ ವಿಶ್ವಕರ್ಮ ಗೆಳೆಯರ ಬಳಗ ಅಧ್ಯಕ್ಷ ಗೋವಿಂದಚಾರಿ, ಉಪಾಧ್ಯಕ್ಷ ರವಿಚಂದ್ರಚಾರ್, ಮುಖಂಡರಾದ ಪಟೇಲ್ ಶಂಕರೇಗೌಡ, ವೆಂಕಟೇಗೌಡ, ಕುಮಾರ, ಅಣ್ಣೇಗೌಡ, ಜವರೇಗೌಡ, ಶಂಭುಗೌಡ, ಸೋಮಚಾರ್, ಸುರೇಶ, ಶಿವಪ್ಪ, ರಾಜೇಗೌಡ, ಚಂದ್ರೆಗೌಡ, ರಾಜಚಾರ್, ಅಪ್ಪಾಜಿಚಾರ್, ಶಂಕರಚಾರ್, ಪುರುಷೋತ್ತಮ್, ನಾಗರಾಜಚಾರ್, ನರಸಿಂಹಚಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular