ಮಂಡ್ಯ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ವತಿಯಿಂದ ವಿಶ್ವಕರ್ಮ ಮಹೋತ್ಸವ ಹಾಗೂ ಜನಜಾಗೃತಿ ಸಮಾವೇಶವನ್ನು ಮಳವಳ್ಳಿ ತಾಲ್ಲೂಕಿನ ಹಲಗೂರಿನ ಕಾಳಿಕಾಂಬ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮಗಳಲ್ಲೂ ನಾವು ಮಾಡುವ ವಿಗ್ರಹ ಕಬ್ಬಿಣ ಕೆಲಸ. ಚಿನ್ನದ ಕೆಲಸ. ರೈತರಿಗೆ ನೇಗಿಲು ನೀಡುವ ನಮ್ಮ ಕಸುಬು ಶ್ರೇಷ್ಠವಾದದ್ದು ಎಂದರು.
ನಾವು ನಮ್ಮ ಜನಾಂಗದವರು ದೇವಸ್ಥಾನದ ವಿಗ್ರಹ ಮಾಡುತ್ತೇವೆ. ವಿಗ್ರಹ ಮಾಡುವರಿಗೆ ನಮಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶವಿರುತ್ತದೆ ನಂತರ ಇರುವುದಿಲ್ಲ. ನಮ್ಮ ಕುಲಕಸುಬೆ ನಮ್ಮ ಮಕ್ಕಳ ಅವಲಂಬಿಸುತ್ತಿದ್ದಾರೆ. ನಮ್ಮ ಜನಾಂಗದವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಕಳಸ ಹೊತ್ತು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ರಕ್ಷಿತಾ, ಹೇಮಂತ್ ಗುರುವಾಚಾರ್, ಸಿದ್ದಾಚಾರಿ ಸೇರಿ ಹಲವರು ಭಾಗಿಯಾಗಿದ್ದರು.
