Sunday, April 20, 2025
Google search engine

Homeರಾಜ್ಯಸುದ್ದಿಜಾಲವಿಶ್ವಕರ್ಮರು ಪ್ರಪಂಚದ ಮೊದಲ ಕಲಾ ವಿನ್ಯಾಸಗಾರರು: ತಹಸೀಲ್ದಾರ್ ನರಸಿಂಹಮೂರ್ತಿ

ವಿಶ್ವಕರ್ಮರು ಪ್ರಪಂಚದ ಮೊದಲ ಕಲಾ ವಿನ್ಯಾಸಗಾರರು: ತಹಸೀಲ್ದಾರ್ ನರಸಿಂಹಮೂರ್ತಿ


ಚನ್ನಪಟ್ಟಣ: ವಿಶ್ವಕರ್ಮರು ಪ್ರಪಂಚದ ಮೊದಲ ಕಲಾ ವಿನ್ಯಾಸಗಾರರಾಗಿದ್ದು, ದೇವರು ಸೃಷ್ಠಿಸಿದ ಪರಿಸರಕ್ಕೆ ತನ್ನದೇ ದೃಷ್ಟಿಕೋನದಲ್ಲಿ ಸುಂದರತೆ ಮತ್ತು ಅಕರ್ಷಣೆ ರೂಪವನ್ನು ನೀಡುವ ಮೂಲಕ ವಿಶ್ವಕರ್ಮ ಸಮುದಾಯವು ಸಮಾಜದಲ್ಲಿನ ಎಲ್ಲಾ ಸಮುದಾಯಕ್ಕೆ ಕೊಡುಗೆ ನೀಡಿದೆ ಎಂದು ತಹಸೀಲ್ದಾರ್ ನರಸಿಂಹಮೂರ್ತಿ ಅವರು ಬಣ್ಣಿಸಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ ವಿಶ್ವಕರ್ಮ ಸಮುದಾಯ ಸಮಾಜದಲ್ಲಿ ಐದು ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಪ್ರಕೃತಿಗೆ ಸುಂದರತೆಯನ್ನು ನೀಡಿದ್ದಾರೆ. ನಮ್ಮ ದೇಶದಲ್ಲಿನ ಪ್ರವಾಸಿ ತಾಣಗಳು, ಪಟ್ಟಣದಲ್ಲಿನ ಬಹುಮಹಡಿ ಕಟ್ಟಡಗಳು ಸೇರಿದಂತೆ ಹಳ್ಳಿಯಿಂದ- ದಿಲ್ಲಿಯವರೆಗೆ ಪ್ರಕೃತಿಗೆ ಸುಂದರವಾದ ರೂಪ ನೀಡುವಲ್ಲಿ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮುದಾಯದ ಮುಖಂಡರಾದ ಜೆ.ಎಸ್. ರಾಜು ಅವರು ಮಾತನಾಡಿ, ಒಂದು ಹಳ್ಳಿ ನಿರ್ಮಾಣ ಆಗಿದೆ ಎಂದರೆ ಅಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ ಎಂಬುದನ್ನು ಮರೆಯುವಂತಿಲ್ಲ. ರೈತರು ಕೃಷಿಗೆ ಬಳಸುವ ಉಳುಮೆಯ ನೇಗಿಲಿನಿಂದ ಹಿಡಿದು ದೇವಸ್ಥಾನಗಳ ನಿರ್ಮಾಣ, ವಿಗ್ರಹಗಳ ಕೆತ್ತನೆ, ಚಿನ್ನಾಭರಣಗಳ ತಯಾರಿಕೆ, ಕಟ್ಟಡದ ಸಾಮಾಗ್ರಿಗಳು ಹೀಗೆ ಪ್ರತಿ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದ್ದು ಇದನ್ನು ಗುರುತಿಸಿರುವ ಸರ್ಕಾರ ವಿಶ್ವಕರ್ಮ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲು ಕ್ರಮಕ್ಕೆ ಮುಂದಾಗಲು ನಮ್ಮ ನಾಯಕರಾದ ಕೆ.ಪಿ.ನಂಜುಂಡಿ ಅವರ ಶ್ರಮ ಹೆಚ್ಚಿದೆ. ಇಂದು ವಿಶ್ವಕರ್ಮ ಸಮುದಾಯದಲ್ಲಿನ ಎಲ್ಲಾ ಉದ್ಯಮದಲ್ಲಿ ಆಧುನಿಕತೆ, ಮತ್ತು ಕಂಪ್ಯೂಟರ್ ಡಿಸೈನ್‌ನ ಹಾವಳಿ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸಮುದಾಯದ ಯುವಕರು ಸಹ ಇದೀಗ ಉದ್ಯಮದತ್ತ ಮುಖ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ಶಿಕ್ಷಕ ರಾಜಶೇಖರ್ ಅವರು ಮಾತನಾಡಿ, ವಿಶ್ವಕ್ಕೆ ಸುಂದರ ರೂಪ ನೀಡಿರುವ ವಿಶ್ವಕರ್ಮ ಸಮುದಾಯದ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸುಂದರ ಬದುಕು ನಿರ್ಮಾಣ ಮಾಡುವಲ್ಲಿ ಎಡವುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಉದ್ಯಮದತ್ತ ಸೆಳೆದು ಅವರ ವಿದ್ಯಾಭ್ಯಾಸವನ್ನು ಮೊಟಕು ಮಾಡುವ ಜೊತೆಗೆ ಮಕ್ಕಳಿಗೆ ಹಣದ ಆಸೆಯ ಬಲೆಗೆ ಸಿಲುಕಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಾದರು ಸಮುದಾಯದ ಜನತೆ ಎಚ್ಚೆತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಮೊದಲ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಲಕ್ಷ್ಮಿದೇವಮ್ಮ, ಸಮುದಾಯದ ಮುಖಂಡರುಗಳಾದ ಬ್ರಹ್ಮಾಚಾರ್, ಚಿನ್ನಸ್ವಾಮಾಚಾರ್, ಸಿ.ಜಿ. ರಮೇಶ್, ಕೃಷ್ಣಾಚಾರ್, ಪಾಲಿಶ್ ರಾಜು, ರಾಜೇಶ್ ಬೆಳಕೆರೆ, ರಾಜೇಶ್ ಚಕ್ಕೆರೆ, ರಾಮಣ್ಣ, ನಾಗೇಶ್ ಮಾಸ್ಟರ್, ಚಂದ್ರಾಚಾರ್, ನಾಣಿ, ಗುರುರಾಜ್, ಸುರೇಶ್, ಕೃಷ್ಣ, ಚಂದನ್, ದೇವರಾಜ್, ಸುಮಂತ್, ರಾಜೇಶ್, ಚಂದು, ಅರವಿಂದ್, ವಿಜಿ, ಶ್ರೀನಿವಾಸ್, ಸತೀಶ್, ಸುರೇರ್ಶ ಹಾರ್ಡ್‌ವೇರ್, ಕಿರಣ್, ಕಂಬಿ ಕೆಲಸ ರಾಜಣ್ಣ, ಬೆಂಕಿರಾಜು, ಕಂಬಿ ರಾಜಜು, ಕಾಂತರಾಜು, ನಾಗರಾಜು, ಯಶ್ವಂತ್, ಪಿ. ದೇವರಾಜ್, ಪುಟ್ಟಸ್ವಾಮಾಚಾರ್, ದೊಡ್ಡಯ್ಯಚಾರ್, ಕಾಂತರಜಜು, ವೀರಾಚಾರ್, ಮಂಜೇಶ್, ಪ್ರಸನ್ನ, ಜ್ಞಾನೇಶ್, ಕೆಂಪಾಚಾರ್, ಸ್ವಾಮಿ, ಕಾರ್ವಿಂಗ್ ದೊಡ್ಡಾಚಾರ್, ರವಿಚಂದ್ರ, ಬಾಬು ಹೊಂಗನೂರು, ರಮೇಶ್, ಬಸವಾಚಾರ್, ಸಇದ್ದಪ್ಪಾಜಿ ತೂಬಿನಕೆರೆ, ಕುಕ್ಕೂರುದೊಡ್ಡಿ ದೇವರಾಜ್, ಮನು, ಬಸವರಾಜಾಚಾರ್ ಸುನ್ಣಘಟ್ಟ, ಶ್ರೀನಿವಾಸ ಮರಳುಹೊಲ, ಸೀನಪ್ಪ, ವೀರಭದ್ರ, ಉಪ್ಪಿ ನಾಗರಾಜು, ಕೆ.ಎನ್. ರಾಜು, ವಿನಯ್, ಸತೀಶ್, ಪ್ರಸನ್ನ ಕುಮಾರ್, ರಾಜೇಶ್, ಮಂಜು, ಕುಮಾರ, ಭಾಗ್ಯ, ರಾಜು, ಗುರುಬಸವಾಚಾರ್ ಆರ್., ವೆಂಕಟೇಶ್ ಹಲಸಿನಮರದೊಡ್ಡಿ, ಸೇರಿದಂತೆ ಶಿಕ್ಷಕಿಯಾದ ಶ್ರೀಮತಿ ಮಂಜು ಎಂ.ಎನ್. ರವರು ವಿಶ್ವಕರ್ಮರ ಕೊಡುಗೆಗಳನ್ನು ಸ್ಮರಿಸಿದರು.

RELATED ARTICLES
- Advertisment -
Google search engine

Most Popular