Friday, April 18, 2025
Google search engine

Homeರಾಜ್ಯಶ್ರೀರಂಗಪಟ್ಟಣ  ಪ್ರವಾಸಿ ತಾಣಗಳಿಗೆ ಜಿ20 ಶೃಂಗಸಭೆಯ ಪ್ರತಿನಿಧಿಗಳ ಭೇಟಿ: ಜಿಲ್ಲಾಡಳಿತದಿಂದ ಸಕಲ ಸಿದ್ದತೆ

ಶ್ರೀರಂಗಪಟ್ಟಣ  ಪ್ರವಾಸಿ ತಾಣಗಳಿಗೆ ಜಿ20 ಶೃಂಗಸಭೆಯ ಪ್ರತಿನಿಧಿಗಳ ಭೇಟಿ: ಜಿಲ್ಲಾಡಳಿತದಿಂದ ಸಕಲ ಸಿದ್ದತೆ

ಶ್ರೀರಂಗಪಟ್ಟಣ: ಇಂದು ಜಿ20 ಶೃಂಗಸಭೆಯ ಪ್ರತಿನಿಧಿಗಳು ಶ್ರೀರಂಗಪಟ್ಟಣ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ದೇಶ-ವಿದೇಶದ ಪ್ರತಿನಿಧಿಗಳ ಸ್ವಾಗತಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೈಸೂರಿನಲ್ಲಿ ಜಿ20 ಶೃಂಗಸಭೆಯ ಪೂರ್ವಭಾವಿ ಸಭೆ ನಡೆಯಲಿದ್ದು, ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆಗೆ ಜಿ20 ಶೃಂಗಸಭೆ ಪ್ರತಿನಿಧಿಗಳು ಭೇಟಿ ನೀಡಲಿದ್ದಾರೆ.

ಸಂಜೆ 6 ಗಂಟೆಗೆ ಶ್ರೀರಂಗಪಟ್ಟಣದ ದರಿಯಾ ದೌಲತ್, ರಂಗನಾಥ ಸ್ವಾಮಿ ದೇಗುಲ, ಕೆಆರ್ ಎಸ್ ಬೃಂದಾವನ ಗಾರ್ಡನ್ ಗೆ ಭೇಟಿ ನೀಡಲಿದ್ದಾರೆ. ದರಿಯಾ ದೌಲತ್ ಹಾಗೂ ಕೆಆರ್ ಎಸ್ ನಲ್ಲಿ‌ ಗಣ್ಯರನ್ನು ಸ್ವಾಗತಿಸಲು ಕಲಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಮಂಗಳವಾರದಿಂದ ಮೈಸೂರಿನಲ್ಲಿ ಜಿ20 ಶೃಂಗಸಭೆಯ ಪೂರ್ವಭಾವಿ ಸಭೆ ನಡೆಯುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿದೆ.

ಬಿಗಿ ಪೊಲೀಸ್ ಭದ್ರತೆ

ಜಿ20 ಶೃಂಗಸಭೆಯ ಸದ್ಯರು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದ್ದು, ಪ್ರವಾಸಿಗರಿಗೆ ಇಂದು ಮಧ್ಯಾಹ್ನದ ನಂತರ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

RELATED ARTICLES
- Advertisment -
Google search engine

Most Popular