ರಾಮನಗರ: ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ರ ಸಂಬಂಧ ೨೩-ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಾಮಾನ್ಯ ವೆಚ್ಚ ವೀಕ್ಷಕರಾದ ಅಭಯ್ ಕುಮಾರ್ ಅವರು ಇಂದು ಶುಕ್ರವಾರ ಕುಣಿಗಲ್ ತಾಲ್ಲೂಕಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಾದ ಮುನಿಯಪ್ಪನ ಪಾಳ್ಯ, ಸಂತೆ ಮಾವತ್ತೂರು ಹಾಗೂ ಮೋದೂರು ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಳೀಯ ಮತದಾರರ ಅಭಿಪ್ರಾಯವನ್ನು ಪಡೆದರು.
