Sunday, April 20, 2025
Google search engine

Homeರಾಜ್ಯವಿಶ್ವೇಶ್ವರಯ್ಯ ಅವರ ಸಾಧನೆ ಪ್ರತಿಯೊಬ್ಬರೂ ಮೆಚ್ಚಲೇಬೇಕು: ವಿ.ಸಿ.ಉಮಾಶಂಕರ್

ವಿಶ್ವೇಶ್ವರಯ್ಯ ಅವರ ಸಾಧನೆ ಪ್ರತಿಯೊಬ್ಬರೂ ಮೆಚ್ಚಲೇಬೇಕು: ವಿ.ಸಿ.ಉಮಾಶಂಕರ್

ಮದ್ದೂರು: ಭಾರತದ ಪವಿತ್ರ ಭೂಮಿಯಲ್ಲಿ ಜನಿಸಿದರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇದಾವಿ, ತಂತ್ರಜ್ಞ, ಅಮರವಾಸ್ತುಶಿಲ್ಪಿ, ಭಾರತ ಭಾಗ್ಯವಿಧಾತ, ಸರ್ ರ್ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಅವರ ಸಾಧನೆ ಪ್ರತಿಯೊಬ್ಬರೂ ಮೆಚ್ಚಲೇಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ  ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಗ್ರಾಮಸ್ಥರ ವತಿಯಿಂದ  ಶುಕ್ರವಾರ ಹಮ್ಮಿಕೊಂಡಿದ್ದ  ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಭಿವೃದ್ಧಿಯ ಹರಿಕಾರರಾಗಿ, ದೇಶಾದ್ಯಂತ ಕೈಗಾರಿಕೆ, ಅಣೆಕಟ್ಟೆ, ಶಿಕ್ಷಣ, ಹೀಗೆ ನಾನ ಕ್ಷೇತ್ರಗಳಲ್ಲಿ ದೇಶವನ್ನು ಪ್ರಗತಿಪತದತ್ತ ಮುನ್ನಡೆಸಿದ ಕೀರ್ತಿ ಸರ್.ಎಂ.ವಿ. ಅವರಿಗೆ ಸಲ್ಲುತ್ತದೆ ಎಂದರು.

ಶ್ರೇಷ್ಠ ಇಂಜಿನಿಯರ್ ಆಗಿ,   ಆದರ್ಶಪ್ರಾಯ ವ್ಯಕ್ತಿ ಸರ್.ಎಂ.ವಿ. ಅವರು ಸರಳ ಜೀವನ ಮತ್ತು ಉನ್ನತ ಚಿಂತನೆಯಲ್ಲಿ  ನಂಬಿಕೆ ಇಟ್ಟಿದವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿ ರವರ ದೂರದೃಷ್ಟಿಯ ಫಲವಾಗಿ ಕನ್ನಂಬಾಡಿ ಬಳಿ ಕೆ ಆರ್ ಎಸ್ ಅಣೆಕಟ್ಟು ನಿರ್ಮಿಸಿದ್ದು, ನಮ್ಮ ನಾಡಿನ ಹಿತಕ್ಕಾಗಿ ಹೊರತು ತಮಿಳುನಾಡಿನ ಹಿತಕ್ಕಲ್ಲ ಎಂದು ನಮ್ಮ ನಾಳುವ ಸರ್ಕಾರಗಳು ಚಿಂತಿಸಬೇಕಾಗಿದೆ. ಆದ್ದರಿಂದ ನಾಡಿನಲ್ಲಿ ನೀರಿನ ಸಂಗ್ರಹ ಮತ್ತು ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಮೇಕೆದಾಟು ಯೋಜನೆ, ಶೀಘ್ರವಾಗಿ ಪ್ರಾರಂಭಿಸುವಂತೆ ಉಭಯ ಸರ್ಕಾರಗಳನ್ನು ಒತ್ತಾಯಿಸಿದರು.

ಸರ್.ಎಂ.ವಿ.  ಜಯಂತಿಯನ್ನು ಕಳೆದ 29 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಮ್ಮೆಲ್ಲರ ಹೆಮ್ಮೆಯ  ವಿಷಯ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ವಿ. ಎನ್, ಗಿರೀಶ್, ಗ್ರಾ ಪಂ ಅಧ್ಯಕ್ಷೆ ವಸಂತ,  ಸದಸ್ಯ ಎಸ್. ದಯಾನಂದ, ಎಂಪಿಸಿಎಸ್ ನಿರ್ದೇಶಕ ವಿ.ಕೆ. ಶ್ರೀನಿವಾಸ, ಕಕಜವೇ ತಾಲೂಕು ಮಹಿಳಾಧ್ಯಕ್ಷೆ ಸುಧಾ, ಮುಖಂಡರಾದ ಕೊಣಿಯನ್ ರಾಜಣ್ಣ, ವಿ.ಆರ್. ಲೋಕೇಶ್, ಜಗ್ಗಿ ಸೀನಪ್ಪ, ರಮೇಶ್, ವಿ. ಆರ್. ಸತೀಶ್, ವಿ.ಕೆ. ಸಂಪತ್ತು, ವಿ.ಈ. ಕೃಷ್ಣ, ಗೌತಮ್, ಅಂಗಡಿ ಸೀನಪ್ಪ, ನಾಗ ಇದ್ದರು.

RELATED ARTICLES
- Advertisment -
Google search engine

Most Popular