ಮೈಸೂರು : ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ವಿಶ್ವಶಾಂತಿ, ವಿವಿಧತೆಯಲ್ಲಿಏಕತೆಯ ಬಗ್ಗೆ ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿಪ್ರತಿಪಾದಿಸಿದ ಮೌಲ್ಯಗಳು ವಿದ್ಯಾರ್ಥಿಗಳಿಗೆ ದಾರಿದೀಪವಾಗುವುದರ ಜತೆಗೆ ಭಾರತಾಂಬೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಆಗಿದ್ದಾರೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಆರ್ ರಘು ಕೌಟಿಲ್ಯ ಹೇಳಿದರು.
ಸರಸ್ವತಿಪುರಂನಲ್ಲಿರುವ ಟಿ.ಟಿ.ಎಲ್ ಕಾಲೇಜ್ ಆವರಣದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಹಾಗೂ ಟಿ.ಟಿ.ಎಲ್ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಸ್ವಾಮಿ ವಿವೇಕಾನಂದ ೧೬೧ನೇ ಜಯಂತಿಯ ಅಂಗವಾಗಿ ವಿವೇಕಾ ಕಲಾ ಹಬ್ಬ ದಲ್ಲಿ ಸ್ವಾಮಿ ವಿವೇಕಾನಂದರ ಚಿತ್ರವನ್ನು ಬಿಡಿಸುವ ಮೂಲಕ ೧೫೦ಕ್ಕೂ ಹೆಚ್ಚು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ನಾವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಬೇಕು. ಅವರಲ್ಲಿಇರುವುದು ಎಲ್ಲವೂ ರಚನಾತ್ಮಕವಾದುದು ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಇಂದಿನ ಯುವಜನಾಂಗ ವಿವೇಕಾನಂದರ ಸಂದೇಶ ಪಾಲಿಸಿದರೆ ಭಾರತದ ಭವಿಷ್ಯ ಸುಂದರವಾಗಿರುತ್ತದೆ ಎಂದರು.
ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್
ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ತರುವುದೇ ಧರ್ಮದ ಮೂಲ ಉದ್ದೇಶ. ಇಂದಿನ ವಿದ್ಯಾರ್ಥಿಗಳು ವಿವೇಕಾನಂದರ ವಿಚಾರಧಾರೆಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜೇತರಾದ ಮಕ್ಕಳಿಗೆ ಉತ್ತೇಜನ ನೀಡಲು ನಗದು ಬಹುಮಾನ ವಿತರಿಸಿದ ನಾರಾಯಣ ಹೃದಯಾಲಯದ ಕಾರ್ಡಿಯೋ ತೊರಾಸಿಕ್ ಸರ್ಜನ್ ತಜ್ಞರಾದ ಡಾಕ್ಟರ್ ಎಂ ಎನ್ ರವಿ ರವರು ೬ ರಿಂದ ೧೨ ವರ್ಷದ ವಯಾಮಿತಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಾವನಿ ಎಚ್ ಪಿ, ದ್ವಿತೀಯ ಬಹುಮಾನ ಪ್ರಣಾಗ್ ಸಮೃದ್ಧ ಎ, ತೃತೀಯ ಬಹುಮಾನ ರೋಮಿತ್ ಆರ್ಯಾ ಡಿ. ೧೩ ರಿಂದ ೨೪ ವರ್ಷದ ವಯೋಮಿತಿಯಲ್ಲಿ ಪ್ರಥಮ ಬಹುಮಾನ ಪ್ರೀತಂ ಎನ್, ದ್ವಿತೀಯ ಬಹುಮಾನ ಸಚಿನ್, ತೃತೀಯ ಬಹುಮಾನ ನಾಗೇಂದ್ರ ಪ್ರಸಾದ್.೨೫ರಿಂದ೩೬ ವರ್ಷದ ವಯೋಮಿತಿಯಲ್ಲಿ ಪಾರಿತೋಷಕ ಬಹುಮಾನವನ್ನು ಗಾಯಿತ್ರಿ ಎಂ ಪಡೆದಿರುತ್ತಾರೆ.ಪ್ರಜ್ವಲ್ ಎಂ ಬಡಿಗಾರ್ ಮತ್ತು ಸುಚಿತ್ರ ಎಸ್ ರವರು ಪರಿತೋಷಕ ಬಹುಮಾನವನ್ನು ಪಡೆದಿರುತ್ತಾರೆ.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಬಿಜೆಪಿ ರಾಜ್ಯ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಆರ್ ರಘು ಕೌಟಿಲ್ಯ,ಟಿ ಟಿ ಎಲ್ ಟ್ರಸ್ಟ್ ನ ಸಿಇಒ ಶ್ರೀಮತಿ ಚೇತನ ರಾಮದಾಸ್ ಹಾಗೂ ಶ್ರೀಮತಿ ಗೀತಾ ರಾಮದಾಸ್,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಉದ್ಯಮಿ ಎಂ ಎನ್ ಸಂಜಯ್ , ಟಿಟಿಎಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ವಿ ಪ್ರಶಾಂತ್ ಹಾಗೂ ಟಿ ಟಿ ಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭ್ರಮರಾಂಬ ಎಸ್ ಎಸ್. ಟಿಟಿಎಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಿರೀಶ್ ಹೆಚ್ ಆರ್, ಕೆ ಎಂ ಪಿ ಕೆ ಟ್ರಸ್ಟ್ ನ ಸುಚೇಂದ್ರ, ಮಿರ್ಲೆ ಪನಿಶ್,ವಿದ್ಯಾ, ನಾಗಶ್ರೀ, ಹಾಗೂ ಇನ್ನಿತರರು ಹಾಜರಿದ್ದರು