ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ.
ಮಡಿಕೇರಿ: ಜಿಲ್ಲೆಯ ಗೋಣಿಕೊಪ್ಪ ಸಮೀಪದ ಕೊಟ್ಟಗೇರಿ ಗ್ರಾಮದ ಶೀಲಾ ಮೋಹನ್ ದಂಪತಿಯ ಪುತ್ರಿ ವಿ.ಎಂ ನಿಸರ್ಗ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದಾರೆ. ಕನ್ನಡ ವಿಷಯದಲ್ಲಿ 99, ಇಂಗ್ಲಿಷ್ ವಿಷಯದಲ್ಲಿ 89, ಇಂಗ್ಲಿಷ್ ಸಾಹಿತ್ಯದಲ್ಲಿ 96, ಇತಿಹಾಸ ಮತ್ತು ಸಿವಿಕ್ಸ್ ವಿಷಯದಲ್ಲಿ 100, ಭೂಗೋಳಶಾಸ್ತ್ರದಲ್ಲಿ 86, ಗಣಿತ ವಿಷಯದಲ್ಲಿ 79, ಕಮರ್ಷಿಯಲ್ ಸ್ಟಡೀಸ್ ನಲ್ಲಿ 100, ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ 96 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.