Thursday, December 11, 2025
Google search engine

Homeಸ್ಥಳೀಯಒಕ್ಕಲಿಗರ ನೌಕರರ ಸ್ನೇಹ ಬಳಗದಿಂದ ಜನವರಿ 4 ರಂದು ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಆಚರಣೆ

ಒಕ್ಕಲಿಗರ ನೌಕರರ ಸ್ನೇಹ ಬಳಗದಿಂದ ಜನವರಿ 4 ರಂದು ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಆಚರಣೆ

ವರದಿ:ವಿನಯ್ ದೊಡ್ಡಕೊಪ್ಪಲು :


ಕೆ.ಆರ್.ನಗರ : ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರು ಜಗದ ಕವಿ, ಯುಗದ ಕವಿಯಾಗಿದ್ದಾರೆ, ಅವರ ಜನ್ಮದಿನವನ್ನು ಮುಂಬರುವ ಜನವರಿ 4 ರಂದು ತಾಲೂಕು ಒಕ್ಕಲಿಗರ ನೌಕರರ ಸ್ನೇಹ ಬಳಗದಿಂದ ವಿಶಿಷ್ಟವಾಗಿ ಈ ಬಾರಿ‌ ಆರಚಣೆಯನ್ನು ಕೆ.ಆರ್.ನಗರ ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ ಸಮುದಾಯ ಭವನದಲ್ಲಿ ಅಯೋಜಿಸಲಾಗಿದೆ ಎಂದು ತಾಲೂಕು ಒಕ್ಕಲಿಗರ ನೌಕರರ ಸ್ನೇಹ ಬಳಗದ ಅಧ್ಯಕ್ಷ ಲಕ್ಕಿಕುಪ್ಪೆ ಶಂಕರೇಗೌಡ ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳಾದ ಪ್ರೋ.ಕೆ.ಎಸ್.ರಂಗಪ್ಪ ಅವರಿಗೆ ಕಾರ್ಯಕ್ರಮಕ್ಕೆ ಆಗಮಿಸಿ‌ ಯಶಸ್ವಿಯಾಗಿ ನಡೆಸಿ ಕೊಂಡುವಂತೆ ಹೂಗುಚ್ಚ ನೀಡಿ‌ ಆಹ್ವಾನಿಸಿ‌ ಮಾತನಾಡಿದರು.

ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕುವೆಂಪುರವರು ರಚಿಸಿರುವ ಎಲ್ಲಾ ಕಾವ್ಯಗಳಲ್ಲಿ ಮಾನವೀಯತೆಯ ಸಂದೇಶವಿದೆ. ಅವರ ಸಂದೇಶಗಳನ್ನು ನಾವೆಲ್ಲರೂ ಅರಿಯಬೇಕು. ಭಾರತಮಾತೆಯ ಮಗನಾಗಿ ಹುಟ್ಟಿ ಇಡೀ ಮನುಕುಲಕ್ಕೆ ವಿಶ್ವಮಾನವ ಸಂದೇಶಗಳನ್ನು ಸಾರಿದ ಕುವೆಂಪು ಅವರ ಸ್ಮರಣೆ ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಬಳಿಕ ಹುಣಸೂರಿನ‌ ಬಿಳಿಗೆರೆಯ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಆಶಾನಂದೀಶ್ ಅವರನ್ನು ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಯ ಬಗ್ಗೆ ಪ್ರಧಾನ ಭಾಷಣ ಮಾಡಲು ನೌಕರರ ಸ್ನೇಹ ಬಳಗದಿಂದ ಮುಕ್ತ ಆಹ್ವಾನ‌ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಉಪ ಪ್ರಾಂಶುಪಾಲೆ ಆಶಾನಂದೀಶ್
ಮಾತನಾಡಿ ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ
ಮನುಷ್ಯತ್ವ ನಮ್ಮೊಳಗಿದ್ದರೆ ಮಾತ್ರ ಎಲ್ಲರೂ ಮನುಷ್ಯರಾಗಲು ಸಾಧ್ಯ. ಪಂಪ ಹಾಗೂ ಕುವೆಂಪು ಮಾನವತೆಯ ಎರಡು ಮುಖಗಳಾಗಿದ್ದಾರೆ. ಕುವೆಂಪು ಅವರು ಬುದ್ಧ, ಬಸವ, ಅಂಬೇಡ್ಕರ್, ಮಹಾವೀರ ಅವರ ಅದರ್ಶಗಳನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರಾಗಿದ್ದಾರೆ ಅಂತಹ‌ ಮಹಾನ್ ರಾಷ್ಟ್ರಕವಿ ಬಗ್ಗೆ ವಿಚಾರಧಾರೆಯನ್ನು ತಿಳಿಸುವ ಅವಕಾಶ ದೊರೆತ್ತಿರುವುದಕ್ಕೆ ಧನ್ಯವಾದಗಳನ್ನು ಅಯೋಜಕರಿಗೆ ತಿಳಿಸಿದರು.

ತಾಲೂಕು ಒಕ್ಕಲಿಗರ ನೌಕರರ ಸ್ನೇಹ ಬಳಗದ ಉಪಾಧ್ಯಕ್ಷ ಲಯನ್ಸ್ ಸ್ಕೂಲ್ ನ ಮುಖ್ಯಶಿಕ್ಷಕ ಟಿ.ಪಿ.ನಂಧೀಶ್, ಕಾರ್ಯದರ್ಶಿ ಈಶ್ವರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ನಿರ್ಧೆಶಕ ಕಂಚುಗಾರಕೊಪ್ಪಲು ದೇವೇಂದ್ರ, ತಾ.ಜಾ.ದಳ ವಕ್ತಾರ ಕೆ.ಎಲ್.ರಮೇಶ್, ನೌಕರರ ಬಳಗದವರಾದ ನಂಜುಂಡ, ಪಾಲಾಕ್ಷ, ಹರೀಶ್, ಮನೋಹರ, ಯೋಗೇಶ್ ಮೊದಲಾದವರು ಇದ್ದರು.

ಚಿತ್ರಶೀರ್ಷಿಕೆ : ತಾಲೂಕು ಒಕ್ಕಲಿಗರ ನೌಕರರ ಸ್ನೇಹ ಬಳಗದಿಂದ ಜನವರಿ 4 ರಂದು ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳಾದ ಪ್ರೋ.ಕೆ.ಎಸ್.ರಂಗಪ್ಪ ಅವರುಗಳನ್ನು ಕಾರ್ಯಕ್ರಮ ಆಗಮಿಸಿ‌ ಯಶಸ್ವಿಯಾಗಿ ನಡೆಸಿ ಕೊಂಡುವಂತೆ ಹೂಗುಚ್ಚ ನೀಡಿ‌ ಆಹ್ವಾನಿಸಲಾಯಿತು.

RELATED ARTICLES
- Advertisment -
Google search engine

Most Popular