Sunday, April 20, 2025
Google search engine

Homeಕ್ರೀಡೆಭಗವಾನ್ ಬಿರ್ಸಾ ಮುಂಡ ರವರ 148ನೇ ಜನ್ಮದಿನದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ

ಭಗವಾನ್ ಬಿರ್ಸಾ ಮುಂಡ ರವರ 148ನೇ ಜನ್ಮದಿನದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ

ಎಡತೊರೆ ಮಹೇಶ್

ಹೆಚ್.ಡಿ.ಕೋಟೆ: ಬೆಂಗಳೂರಿನ ಎಸ್ ಎಸ್ ಫೌಂಡೇಶನ್, ಹಾರೋಜಿನ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಭಗವಾನ್ ಬಿರ್ಸಾ ಮುಂಡ ರವರ 148 ನೇ ಜನ್ಮ ದಿನದ ಅಂಗವಾಗಿ ಆದಿವಾಸಿ ಬುಡಕಟ್ಟು ಯುವಕರಿಗೆ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.

ಹೆಚ್.ಡಿ.ಕೋಟಿಯಲ್ಲಿ ನಡೆದ ಬುಡಕಟ್ಟು ಯುವಕರ ವಾಲಿಬಾಲ್ ಪಂದ್ಯಾವಳಿಗೆ ಸರಗೂರು ಮತ್ತು ಹೆಚ್.ಡಿ.ಕೋಟೆ ತಾಲೂಕುಗಳಿಂದ 5 ತಂಡಗಳು ಭಾಗವಹಿಸಿದ್ದವು.

ಬಹುಮಾನದ ವಿವರ

ಪ್ರಥಮ ಬಹುಮಾನ ಅರಳಿಕಟ್ಟಿ ಹಾಡಿ (15 ಸಾವಿರ + ಟ್ರೋಪಿ)

ದ್ವಿತೀಯ ಬಹುಮಾನ K.R ಪುರ ( ಮಗ್ಗೆ) ಹಾಡಿ ,(10 ಸಾವಿರ ನಗದು ಬಹುಮಾನ + ಟ್ರೋಪಿ)

ತೃತೀಯ ಬಹುಮಾನ ಕುಂಟೇರಿ ಹಾಡಿ (7 ಸಾವಿರ + ಟ್ರೋಪಿ )

4 ನೇ ಬಹುಮಾನ ಅಂಕ ನಾಥಪುರ ಹಾಡಿ(ಟ್ರೋಪಿ ಹಾಗೂ ನೆಟ್) ಪಡೆದುಕೊಂಡವು.

ಭಾಗವಹಿಸಿದ ಎಲ್ಲಾ ತಂಡಗಳಿಗೆ ವಾಲಿಬಾಲ್ ಟೀ ಶರ್ಟ್ಸ್ ವಿತರಿಸಲಾಗಿದೆ. ಬಿಸ್ಕೆಟ್ಸ್, ನೀರು, ಮಧ್ಯಾಹ್ನ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಸುಮಾರು 700 ಜನ ಹಾಡಿ ಹುಡುಗರು 21 ಜನ ಕೋಚ್ ಗಳು ಪಂದ್ಯಾವಳಿಗಳನ್ನು ನಡೆಸಿಕೊಟ್ಟರು.

ಸೂರ್ಯ ನಾರಾಯಣ್ ಜೀ ಮತ್ತು  ವಿರೂಪಾಕ್ಷಪ್ಪ, VHP ಮಾದೇವಪ್ಪ ,ಸಂತೋಷ್, ಪ್ರಶಾಂತ್, ವಿನಯ್ ಸೇರಿದಂತೆ ವಿ ಎಚ್ ಪಿ  , ಆರ್ ಎಸ್ ಎಸ್ ಮತ್ತು ಬಜರಂಗದಳದ ಸ್ವಯಂಸೇವಕರು ಆದಿವಾಸಿ ಮುಖಂಡರು ಹಾಜರಿದ್ದರು.

RELATED ARTICLES
- Advertisment -
Google search engine

Most Popular