Friday, April 11, 2025
Google search engine

Homeರಾಜ್ಯಸುದ್ದಿಜಾಲಮತದಾರರ ಪಟ್ಟಿ ಪರಿಷ್ಕರಣೆ ನಿಯಮಾವಳಿ ಪ್ರಕಾರ: ರಾಜಕೀಯ ಪಕ್ಷಗಳಿಗೂ ಮಾಹಿತಿ ನೀಡಿ: ವಿ. ಅನ್ಬು ಕುಮಾರ್

ಮತದಾರರ ಪಟ್ಟಿ ಪರಿಷ್ಕರಣೆ ನಿಯಮಾವಳಿ ಪ್ರಕಾರ: ರಾಜಕೀಯ ಪಕ್ಷಗಳಿಗೂ ಮಾಹಿತಿ ನೀಡಿ: ವಿ. ಅನ್ಬು ಕುಮಾರ್

ಧಾರವಾಡ : ಧಾರವಾಡ ಜಿಲ್ಲಾಡಳಿತದಿಂದ ಶಿಸ್ತುಬದ್ಧವಾಗಿ ಹಾಗೂ ಪ್ರಾಮಾಣಿಕವಾಗಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಧಾರವಾಡ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ತೃಪ್ತಿ ತಂದಿದೆ. ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಅಭಿನಂದನೆಗಳು ಎನ್ನುತ್ತಾರೆ ಕೃಷಿ ಇಲಾಖೆ ಸರಕಾರದ ಕಾರ್ಯದರ್ಶಿ, ಧಾರವಾಡ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ವಿ. ಅನ್ಬು ಕುಮಾರ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಚುನಾವಣಾ ಶಾಖೆಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ 18,47,023 ಜನಸಂಖ್ಯೆಯಿದ್ದು, 2024ರಲ್ಲಿ 21,40,000 ಆಗಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗಿದೆ.

ಮತದಾರರ ಪಟ್ಟಿ ತಿದ್ದುಪಡಿ, ತೆರವು, ವರ್ಗಾವಣೆ ಹಾಗೂ ಸೇರ್ಪಡೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತರಾಗಬೇಕು. ಸಂಬಂಧಿಸಿದ ಕಾರ್ಯಗಳಿಗೆ ಅಗತ್ಯ ದಾಖಲೆಗಳನ್ನು ನಿರ್ವಹಿಸಬೇಕು ಎಂದರು. ಈಗಾಗಲೇ ಅಕ್ಟೋಬರ್ 27, 2023 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 7,71,719 ಪುರುಷರು ಮತ್ತು 7,66,798 ಮಹಿಳೆಯರು ಮತ್ತು 86 ಇತರರು ಸೇರಿದಂತೆ ಒಟ್ಟು 15,38,603 ಮತದಾರರನ್ನು ಒಳಗೊಂಡಿದೆ. ಈಗ ಪ್ರಸ್ತುತ ಪರಿಷ್ಕರಣೆ ನಂತರ, ಜನವರಿ 12, 2024 ರಂತೆ ಜಿಲ್ಲೆಯಲ್ಲಿ 7,80,709 ಪುರುಷರು ಮತ್ತು 7,79,342 ಮಹಿಳೆಯರು ಮತ್ತು 90 ಇತರರು ಇದ್ದಾರೆ ಎಂದು ಅವರು ಹೇಳಿದರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿಯಲ್ಲಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸಲಾಗುವುದು. ಅರ್ಹ ನಾಗರಿಕರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಬೇಕು ಎಂದು ತಿಳಿಸಿದರು.

ಜನಗಣತಿಯ ಪ್ರಕಾರ ರಾಜ್ಯದ ಲಿಂಗ ಪ್ರಮಾಣ 973 ಇದ್ದರೆ, 2023ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಜಿಲ್ಲೆಯ ಲಿಂಗ ಪ್ರಮಾಣ 987 ಮತ್ತು 994 ಇತ್ತು. ಈಗ ಜ. ಜಿಲ್ಲೆಯಲ್ಲಿ ಲಿಂಗ ಅನುಪಾತ 12ರಷ್ಟಿದೆ ಎಂದು ಮಾಹಿತಿ ನೀಡಿದರು. 2023ರ ಅಕ್ಟೋಬರ್ 27ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ಜಿಲ್ಲೆಯಲ್ಲಿ 20,629 ಯುವ ಮತದಾರರಿದ್ದರು. ಇದು ಜ.12,2024ಕ್ಕೆ 10,783 ಸೇರಿ ಜಿಲ್ಲೆಯಲ್ಲಿ ಈಗ 31,412 ಯುವ ಮತದಾರರಿದ್ದಾರೆ. ಎಂದು ತಿಳಿಸಲಾಯಿತು. ಜನವರಿ 12,2024ಕ್ಕೆ ಕೊನೆಗೊಳ್ಳುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ ಒಟ್ಟು 15,60,141 ಮತದಾರರಿದ್ದಾರೆ. ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಬರುವ ಜನವರಿ 22,2024 ರಂದು ಪ್ರಕಟಿಸಲಾಗುವುದು ಎಂದು ಅನ್ಬುಕುಮಾರ ತಿಳಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಗೀತಾ ಸಿ. ಡಿ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರದಾದ್ಯಂತ ಮತದಾರರ ಪಟ್ಟಿ, ಮತಗಟ್ಟೆ ಕೇಂದ್ರ, ಮತದಾರರ ಗುರುತಿನ ಪತ್ರ ವಿತರಣೆ ಕುರಿತು ಸಭೆಯಲ್ಲಿ ವಿವರಿಸಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಮತದಾರರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, ಚುನಾವಣಾ ಶಾಖೆ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular