ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅರ್ಜುನಹಳ್ಳಿ ಗ್ರಾಮದ ವಾರದ ಸಂತೆಯಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ಪ್ರತಿಜ್ಞಾವಿಧಿ ಯನ್ನು ಕೆ.ಆರ್.ನಗರ ತಾ.ಪಂ.ಇಓ.ಜಿ.ಕೆ ಹರೀಶ್ ಜಿಕೆ ರವರು ಬೋಧಿಸಿದರು.

ಕಡ್ಡಾಯ ಮತದಾನದ ಅಗುವ ಅನುಕೂಲತೆಯ ಜಾಗೃತಿ ಅದರ ಪ್ರಭಾವ ಅರಿವಿನ ಬಗ್ಗೆ ರೈತರು ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಪಿಡಿಓ ಜಿ.ಟಿ. ಸಂತೋಷ್ ಗಂಧನಹಳ್ಳಿ, ಗ್ರಾಮ ಆಡಳಿತಾಧಿಕಾರಿ ರಂಜಿತ್, ತಾ.ಪಂ.ನರೇಗ ಸಂಯೋಜಕ ಸಂಜಯ್ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ಜಾಗೃತಿಯಲ್ಲಿ ಭಾಗವಹಿಸಿದ್ದರು.