Saturday, April 19, 2025
Google search engine

Homeರಾಜ್ಯ‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಲೇಖನ ಮೈ ವಿವಿ ಪಠ್ಯಕ್ಕೆ ಆಯ್ಕೆ:ಪತ್ರಕರ್ತ ವಿಜಯಕುಮಾರ್ ಗೆ ಅಭಿನಂದನೆ

‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಲೇಖನ ಮೈ ವಿವಿ ಪಠ್ಯಕ್ಕೆ ಆಯ್ಕೆ:ಪತ್ರಕರ್ತ ವಿಜಯಕುಮಾರ್ ಗೆ ಅಭಿನಂದನೆ

ಬೆಂಗಳೂರು,ಜುಲೈ,15: ಪತ್ರಕರ್ತ ವಿಜಯಕುಮಾರ್ ಅವರ‘ಬೂದಿಯಾಗದ ಕೆಂಡ’ ಪುಸ್ತಕದ ‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಎನ್ನುವ ಲೇಖನ ಮೈಸೂರು ವಿಶ್ವ ವಿದ್ಯಾನಿಲಯದ ಪಠ್ಯಕ್ಕೆ ಆಯ್ಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಅಭಿನಂದನೆ ಸಲ್ಲಿಸಿದೆ.
ವಿಜಿ, ವಿಜ್ಜಿ, ವಿಜಿಯಪ್ಪ ಎಂದೆಲ್ಲಾ ಆತ್ಮೀಯವಾಗಿ ಕರೆಯುವ ಅವನ ನಿಜ ಹೆಸರು ವಿಜಯಕುಮಾರ್ ಸಿಗರನಹಳ್ಳಿ. ಹಾಸನದಲ್ಲಿ ಪತ್ರಕರ್ತನಾಗಿ, ಜ್ಞಾನದೀಪ, ಹಾಸನಮಿತ್ರ, ಜನಮಿತ್ರ, ಅಮೋಘ್ ನ್ಯೂಸ್‌ ನಂತರ ವಿಜಯವಾಣಿ ತನಕ ಕೆಲಸ ಮಾಡಿದ ವಿಜಿ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದವರು. ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಗಾರನಾದ ಮೇಲೆ ಬೆಂಗಳೂರು ನಂತರ ಚಿಕ್ಕಮಗಳೂರಿನಲ್ಲಿ ಸೇವೆ ಮುಂದುವರಿಸಿದ್ದಾರೆ.
ಅವರು ಬರೆದಿದ್ದ ಲೇಖನಗಳನ್ನು ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಅವರ ‘ಅಹರ್ನಿಶಿ ಪ್ರಕಾಶನ’ ಪುಸ್ತಕವಾಗಿ ಪ್ರಕಟಿಸಿತ್ತು. ‘ಬೂದಿಯಾಗದ ಕೆಂಡ’ ಪುಸ್ತಕದ ‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಎನ್ನುವುದು ಲೇಖನ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.

ಕ್ರಿಯಾಶೀಲ ಪತ್ರಕರ್ತ ವಿಜಯಕುಮಾರ್ ಅವರ ಪುಸ್ತಕದ ಅಧ್ಯಾಯವೊಂದು ಮೈಸೂರು ವಿಶ್ವವಿದ್ಯಾನಿಲಯದ ಪಠ್ಯಕ್ಕೆ ಆಯ್ಕೆಯಾಗಿರುವುದಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಅವರನ್ನು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular