ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ಪರಿಹಾರ ವಿತರಿಸುವಲ್ಲಿ ವಿಫಲ
ಹುಣಸೂರು: ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಸ್ವ ಪ್ರತಿಷ್ಠೆಗೋಸ್ಕರ ಪಾದಯಾತ್ರೆ ಕೈಗೊಂಡಿರುವುದು ಅತ್ಯಂತ ಶೋಚನಿಯ ವಿಷಯವಾಗಿದೆ ಎಂದು ಸತ್ಯಪ್ಪ ವಿಷಾದಿಸಿದರು.
ತಮ್ಮ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರು ಸಂಸದರು ಸಚಿವರುಗಳು ಭೇಟಿ ನೀಡುತ್ತಿಲ್ಲ. ಆಗುತ್ತಿರುವ ಅನಾಹುತಗಳ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ವಿತರಿಸುವಲ್ಲಿ ವಿಫಲರಾಗಿದ್ದಾರೆ.
ಜೊತೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮತ್ತು ಆಡಳಿತ ಮತ್ತು ವಿರೋಧ ಪಕ್ಷಗಳು ಸರಿಯಾದ ನಿಟ್ಟಿನಲ್ಲಿ ನಾಗರಿಕರು ರೈತರ ಸಮಸ್ಯೆಗಳನ್ನು ಪರಿಹಾರ ಮಾಡದೇ ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಂತ ಕೆಲಸಗಳು ಇದ್ದರು ಅದರ ಬಗ್ಗೆ ಗಮನ ಹರಿಸದೆ ವಿನಾ ಕಾರಣ ತಮ್ಮ ಪ್ರತಿಷ್ಠೆಗೋಸ್ಕರ ಪಾದಯಾತ್ರೆ ಮಾಡುವ ಮೂಲಕ ಜನರಿಗೆ ಮನರಂಜನೆ ನೀಡುತ್ತಿರುವುದು ಬಹಳ ಶೋಚನೀಯ ವಿಷಯವಾಗಿದೆ.
ರಾಜಕಾರಣಿಗಳು ಅವರ ಹಗರಣ ಮಾಡಿರುವುದನ್ನ ಬಿಚ್ಚಿಡ್ತಿವಿ, ಇವರ ಹಗರಣ ಮಾಡಿರುವುದನ್ನ ಬಿಚ್ಚಿಡ್ತಿವಿ ಎಂದು ಹೇಳುತ್ತಾ ಇವರುಗಳ ಭ್ರಷ್ಟಾಚಾರ ಎಲ್ಲಿ ಬಯಲಾಗುತ್ತೋ ಎಂಬ ಭಯದಲ್ಲಿದ್ದಾರೆ.
ಶಾಸಕರು, ಸಚಿವರು ಮುಖ್ಯಮಂತ್ರಿಯಾದಿಯಾಗಿ ಸರ್ಕಾರಿ ಸಾರ್ವಜನಿಕರು ಕಟ್ಟುವ ಟ್ಯಾಕ್ಸ್ ಮುಖಾಂತರ ಸಂಬಳ ಪಡೆಯುತ್ತಾರೆ. ಆದರೆ ಜನಪ್ರತಿನಿಧಿಗಳು ಸಾರ್ವಜನಿಕರ ಕೆಲಸ ಮಾಡದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದುಂದು ವೆಚ್ಚ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ.
ಸ್ವಂತ ರಾಜಕೀಯ ಪ್ರತಿಷ್ಠೆಗೋಸ್ಕರ ಪಾದಯಾತ್ರೆ ಕೈಗೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ತೀದ್ದಾರೆ ಎಂದು ಸತ್ಯಪ್ಪ ರವರು ಮಾಧ್ಯಮದ ಮುಖಾಂತರ ತಿಳಿಸಿದರು.