ಮೈಸೂರು: ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಿರುವುದನ್ನು ಸಾಬೀತುಪಡಿಸಲು ಹಾಗೂ ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ನಿಗಪಡಿಸಿರುವ ಮಾನದಂಡಗಳ ಬಗ್ಗೆ ದಾಖಲೆಗಳ ಸಹಿತ ಚರ್ಚೆಗಾಗಿ ಕಾಂಗ್ರೆಸ್ ನಿಯೋಗವು ಡಿ.೧ರಂದು ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಭೇಟಿ ನೀಡಲಿದೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ತಿಳಿಸಿದರು.
ಅಂದು ಮಧ್ಯಾಹ್ನ 12ಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ನಾನು ಹಾಗೂ ಬಿಪಿಎಲ್ ವಕ್ಫ್ ಹಾಗೂ ಬಿಪಿಎಲ್ ಪಡಿತರ ಚೀಟಿಗಳ ಬಗ್ಗೆ ದಾಖಲೆಗಳನ್ನು ಕಳುಹಿಸುತ್ತೇವೆ. ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರು ಸಿಗಬೇಕು’ ಎಂದು ಹೇಳಿದರು. ಹಿಂದೆಲ್ಲಾ ನಾವು, ಪಕ್ಷದವರನ್ನು ಚರ್ಚೆಗೆ ಕರೆಯುತ್ತೇವೆ.ಅವರು ಬರಲಿಲ್ಲ. ಈಗ ನಾವೇ ಅಲ್ಲಿಗೆ ಹೋಗಲಿದ್ದೇವೆ. ಈ ವಿಷಯವಾಗಿ ಅಧಿಕೃತವಾಗಿ ಪಕ್ಷದಿಂದ ಪತ್ರವನ್ನೂ ಬರೆಯುತ್ತೇನೆ. ಅವರು ಚರ್ಚೆಗೆ ಬಾರದೇ ಇದ್ದರೆ, ಅವರು ಮಾಡುತ್ತಿರುವ ಆರೋಪಗಳು ಸುಳ್ಳು ಎಂಬುದನ್ನು ಅವರು ಸಾರ್ವಜನಿಕವಾಗಿ ತಿಳಿಸಬೇಕು’ ಎಂದು ಒತ್ತಾಯಿಸಿದರು.
ಡಿ.೯ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ನಾವು ನೀಡುವ ದಾಖಲೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಅಲ್ಲಿ ಚರ್ಚಿಸಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ವಿಚಾರದಲ್ಲಿ ದಿವಾಳಿ ಆಗಿದ್ದಾರೆ ಎಂಬುದನ್ನು ಅಶೋಕ ತಿಳಿಸಲಿ’ ಎಂದರು.