Saturday, April 19, 2025
Google search engine

Homeರಾಜ್ಯಸುದ್ದಿಜಾಲವಾರ್ಡ್ ಮರು ವಿಂಗಡಣೆ ನಕ್ಷೆ ಬಿಡುಗಡೆ ಮಾಡಿದ ಬಿಬಿಎಂಪಿ

ವಾರ್ಡ್ ಮರು ವಿಂಗಡಣೆ ನಕ್ಷೆ ಬಿಡುಗಡೆ ಮಾಡಿದ ಬಿಬಿಎಂಪಿ


ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಗಸ್ಟ್ ೧೮ ರಂದು ವಾರ್ಡ್ ಮರುವಿಗಡಣೆಯ ಕರಡು ಅಧಿಸೂಚನೆ ಬಿಡುಗಡೆ ಮಾಡಿ ಸಾರ್ವಜನಿಕರಿಂದ ಆಕ್ಷೇಪಣೆ ಕೋರಿತ್ತು. ಆ ಕರಡು ಅಧಿಸೂಚನೆಯಲ್ಲಿರುವ ಪ್ರಕಾರ ಬೆಂಗಳೂರಿನ (ಃಚಿಟಿgಚಿಟoಡಿe) ಎಲ್ಲಾ ೨೨೫ ವಾರ್ಡ್‌ಗಳ ನಕ್ಷೆಯನ್ನು ಇದೀಗ ಬಿಡುಗಡೆ ಮಾಡಿದೆ. ಅಧಿಸೂಚನೆ ಹೊರಡಿಸಿದ ೧೫ ದಿನಗಳಲ್ಲಿ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಕಳುಹಿಸಲು ನಗರಾಭಿವೃದ್ಧಿ ಇಲಾಖೆ ಅವಕಾಶ ನೀಡಿದೆ.

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನಕ್ಷೆಯು ಅಸ್ತಿತ್ವದಲ್ಲಿರುವ ಮತ್ತು ವಿಂಗಡಣೆಯಾದ ವಾರ್ಡ್, ಆ ವಾರ್ಡ್ ವಿಸ್ತೀರ್ಣ, ಜನಸಂಖ್ಯೆ, ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರದ ವಿವರಗಳನ್ನು ನೀಡುತ್ತದೆ. ಜನರು ತಮ್ಮ ವಾರ್ಡ್ ಗಡಿಗಳನ್ನು ಪರಿಶೀಲಿಸಬಹುದು ಮತ್ತು ಪೋಸ್ಟ್ ಮೂಲಕ ನಗರಾಭಿವೃದ್ಧಿ ಇಲಾಖೆಗೆ ಆಕ್ಷೇಪಣೆಗಳನ್ನು ಕಳುಹಿಸಬಹುದು ಎಂದು ಬಿಬಿಂಎಪಿ ತಿಳಿಸಿದೆ.

೧೫ ದಿನಗಳ ನಂತರ, ನಗರಾಭಿವೃದ್ಧಿ ಇಲಾಖೆಯು ಎಲ್ಲಾ ಆಕ್ಷೇಪಣೆಗಳನ್ನು ಪರಿಗಣಿಸುತ್ತದೆ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಲಿದೆ. ಆ ನಂತರ ವಾರ್ಡ್‌ಗಳ ಅಂತಿಮ ವಿಂಗಡಣೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಲಿದೆ.
ಕರ್ನಾಟಕ ಹೈಕೋರ್ಟ್ ಜೂನ್‌ನಲ್ಲಿ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಕಾರ್ಯವನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ೧೨ ವಾರಗಳ ಕಾಲಾವಕಾಶ ನೀಡಿತ್ತು. ಈ ವರ್ಷ ಡಿಸೆಂಬರ್ ಒಳಗೆ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.

ಈ ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಮಾಡಿ ವಾರ್ಡ್‌ಗಳ ಸಂಖ್ಯೆಯನ್ನು ೨೪೩ಕ್ಕೆ ಹೆಚ್ಚಿಸಿತ್ತು. ಅದರ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. ಹೀಗಾಗಿ ಮತ್ತೆ ವಾರ್ಡ್ ವಿಂಗಡಣೆ ಮಾಡಿ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಸರ್ಕಾರ ಹೇಳಿತ್ತು. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮರು ವಿಂಗಡಣೆ ವಿಚಾರ ಪರಿಶೀಲಿಸುವುದಾಗಿ ಹೇಳಿತ್ತು. ಜೂನ್ ೧೯ ರಂದು ಕರ್ನಾಟಕ ಹೈಕೋರ್ಟ್ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ೧೨ ವಾರಗಳ ಕಾಲಾವಕಾಶವನ್ನು ನೀಡಿತ್ತು. ಆ ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ೨೪೩ ರಿಂದ ೨೨೫ ಕ್ಕೆ ಇಳಿಸಿದೆ ಕರಡು ಅಧಿಸೂಚನೆ ಹೊರಡಿಸಿದೆ.

RELATED ARTICLES
- Advertisment -
Google search engine

Most Popular