Saturday, April 19, 2025
Google search engine

Homeಸ್ಥಳೀಯಜಲಾಶಯಗಳು ಭರ್ತಿಯಾಗದಿರುವ ಕೆರೆಗಳಿಗೆ ನೀರು: ಸಚಿವ ಡಾ.ಎಚ್.ಸಿ. ಮಹದೇವಪ್ಪ

ಜಲಾಶಯಗಳು ಭರ್ತಿಯಾಗದಿರುವ ಕೆರೆಗಳಿಗೆ ನೀರು: ಸಚಿವ ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಮುಂಗಾರು ಹಂಗಾಮಿಗೆ ಯಾವುದೇ ಬಿತ್ತನೆ ಬೀಜದಕೊರತೆ ಉಂಟಾಗಿಲ್ಲ. ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹಆವರಣದಲ್ಲಿರೈತರಿಗೆ ಭಿತ್ತನೆ ಬೀಜ ವಿತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ೧೯೮.೧೦ ವಾಡಿಕೆ ಮಳೆಗೆ ೨೦೭.೨ಮಿ.ಮೀ. ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಮುಂಗಾರು ವಾಡಿಕೆಯಂತೆ ೨೦೨.೧ ಮಿ.ಮೀ. ಮಳೆ ಆಗಬೇಕಿತ್ತು. ಆದರೆ ೧೬೬.೦೫ ಮಿ.ಮೀ. ಮಳೆ ಮಾತ್ರವಾಗಿದ್ದು, ಶೇ. -೧೭.೬೧ ಮಳೆ ಕೊರತೆಉಂಟಾಗಿದೆ. ಅಂದರೆಒಟ್ಟಾರೆ ೪೦೭.೦೩ ಮಿ.ಮೀ. ವಾಡಿಕೆ ಮಳೆಗೆ ೩೭೮.೦ ಮಿ.ಮೀ. ಮಳೆಯಾಗಿದ್ದು, ಶೇ. – ೭.೧೯ ಮಳೆ ಕೊರತೆಉಂಟಾಗಿದೆಎಂದು ವಿವರಿಸಿದರು.
ಮುಂಗಾರು ಹಂಗಾಮಿಗೆ ೩,೯೭,೮೭೯ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗುರಿ ಹೊಂದಲಾಗಿತ್ತು. ಪ್ರಸ್ತುತ ೨,೧೧,೧೭೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಆಗಿದೆ. ಜಿಲ್ಲೆಯಲ್ಲಿ ಭತ್ತ (೧,೦೩,೨೦೦ ಹೆಕ್ಟೇರ್), ರಾಗಿ (೬೩,೫೨೫ ಹೆ.), ಮುಸುಕಿನ ಜೋಳ (೩೬,೧೪೦ ಹೆ.), ಹತ್ತಿ (೪೨,೯೦೦ ಹೆ.), ತಂಬಾಕು (೬೬,೩೩೫ ಹೆ.), ದ್ವಿದಳ ಧಾನ್ಯ (೪೦,೬೧೪ ಹೆ.), ಸೂರ್ಯಕಾಂತಿ (೪,೬೧೫ ಹೆ.) ,ಕಬ್ಬು (೧೨,೫೨೦ ಹೆ.) ಬೆಳೆಯಲಾಗುತ್ತದೆ ಎಂದರು.
೨೦೨೩ರ ಮುಂಗಾರು ಹಂಗಾಮಿನಲ್ಲಿ ೩,೯೭,೮೭೯ ಹೆ. ಬಿತ್ತನೆ ಪ್ರದೇಶಕ್ಕೆ, ಒಟ್ಟು ೮೮,೭೮೬ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದಿತ್ತು. ಪ್ರಸ್ತುತ ೮೮,೯೩೦ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ರೈತ ಸಂಪರ್ಕ ಕೇಂದ್ರಗಳಿಗೆ ೧೧,೪೪೯ ಕ್ವಿಂಟಾಲ್ ಪೂರೈಸಲಾಗಿದ್ದು, ಈವರೆಗೆ ೨,೧೩೭.೧ ಕ್ವಿಂಟಾಲ್ ವಿತರಿಸಲಾಗಿದೆ.
ಮುಸುಕಿನ ಜೋಳ ಮತ್ತುರಾಗಿ ಬಿತ್ತನೆ ಬೀಜದ ವಿತರಣೆಕಾರ್ಯ ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಿಂದ ಬಿತ್ತನೆ ಬೀಜಗಳನ್ನು ರೈತರಿಗೆ ಕೆ- ಕಿಸಾನ್ ವೆಬ್‌ಸೈಟ್ ಮೂಲಕ ಕ್ಯೂಆರ್‌ಕೋಡ್ ಬಳಸಿಕೊಂಡು ವಿತರಿಸಲಾಗುತ್ತಿದೆ. ಈ ವಿಧಾನದಿಂದಯಾವರೈತರಿಗೆಯಾವ ಬೆಳೆ, ಯಾವ ತಳಿ ಮತ್ತುಯಾವ ಲಾಟ್ ನಂಬರ್‌ನ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿದಾಖಲಾಗುತ್ತದೆಎಂದರು.
ಭತ್ತಕ್ಕೆ ಪ್ರತಿಒಂದುಚೀಲಕ್ಕೆ ಸಾಮಾನ್ಯವರ್ಗದವರಿಗೆ ೮ ಸಹಾಯಧನ, ಪ.ಜಾತಿ, ಪ.ಪಂಗಡಕ್ಕೆ ೧೨ ಸಹಾಯಧನ ನೀಡಲಾಗುತ್ತದೆ. ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನ ಬೇಡಿಕೆ ೧.೨೭ ಮೆ.ಟನ್, ಜು. ೨೭ರ ಅಂತ್ಯದ ಲಭ್ಯತೆ ೧.೨೮ ಮೆಟ್ರಿಕ್‌ಟನ್, ಈವರೆಗೆ ೦.೮೬೬ ಮೆಟ್ರಿಕ್‌ಟನ್, ಪ್ರಸ್ತುತ ೦.೪೨ ಮೆಟ್ರಿಕ್‌ಟನ್‌ದಾಸ್ತಾನುಇದೆ. ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ದಾಸ್ತಾನಿದೆ.
ರೈತ ಮಹಿಳೆರಿಗೆ ಪ್ರಶಸ್ತಿ: ಕೃಷಿಯಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಲು ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ಕೃಷಿ ಪ್ರಶಸ್ತಿ ನೀಡಲಾಗುತ್ತಿದೆ. ಆದ್ದರಿಂದರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪ್ರಶಸ್ತಿ ಯೋಜನೆಯ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಆ. ೩೦ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬೇಕು. ಮುಂಗಾರು ಹಂಗಾಮಿನಲ್ಲಿ ಸುಮಾರು ೯,೮೦,೬೦೨ ತಾಕುಗಳಲ್ಲಿ ಬೆಳೆ ಸಮೀಕ್ಷೆಕಾರ್ಯ ಕೈಗೊಳ್ಳಲಿದ್ದು, ರೈತರೇಅವರಜಮೀನಿನ ಬೆಳೆ ಮಹಿತಿಯನ್ನುಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾಯೋಜನೆಯಡಿಜಿಲ್ಲೆಯಲ್ಲಿ ಬೆಳೆಯುವ ೧೯ ಬೆಳೆಗಳನ್ನು ಅಧಿಸೂಚಿಸಲಾಗಿದೆ. ಈ ಪೈಕಿ ೪ ತೋಟಗಾರಿಕೆ ಬೆಳೆ ಸೇರುತ್ತದೆ. ರೈತರು ಹೆಚ್ಚಿನ ಮಾಹಿತಿಗೆರೈತ ಸಂಪರ್ಕಕೇಂದ್ರಕ್ಕೆ ಭೇಟಿ ನೀಡಬಹುದುಎಂದುಅವರು ಹೇಳಿದರು.
ಈ ಬಾರಿ ಮುಂಗಾರು ಹಂಗಾಮು ನಿಧಾನವಾಗಿಆರಂಭವಾಗಿರುವುದರಿಂದ ಭತ್ತ ಬೆಳೆಯುವ ರೈತರು ದೀರ್ಘಾವಧಿ ತೆಗೆದುಕೊಳ್ಳುವ ಜಯ ಮತ್ತು ಬಿಆರ್-೨೬೫೫ ತಳಿಯನ್ನು ಹೊರತುಪಡಿಸಿ, ಉಳಿದ ಬಿತ್ತನೆ ಬೀಜವನ್ನು ಪಡೆಯಬೇಕುಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಚಂದ್ರಶೇಖರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನಗರಕಾಂಗ್ರೆಸ್‌ ಅಧ್ಯಕ್ಷ ಆರ್. ಮೂರ್ತಿ, ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದರು.

ಬೇಕು. ಎ. ೩೦ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬೇಕು. ಮುಂಗಾರು ಹಂಗಾಮಿನಲ್ಲಿ ಸುಮಾರು 9,80,602 ತಾಕುಗಳಲ್ಲಿ ಬೆಳೆ ಸಮೀಕ್ಷೆ ನಡೆಯಲಿದೆ, ರೈತರೇಅವರಜಮೀನಿನ ಬೆಳೆ ಮಹತಿಯನ್ನುಆಪ್ ಮೂಲಕ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾಯೋಜನೆಯಡಿಜಿಲ್ಲೆಯಲ್ಲಿ ಬೆಳೆಯುವ ೧೯ ಬೆಳೆಗಳನ್ನು ಅಧಿಸೂಚಿಸಲಾಗಿದೆ. ಈ ಕೆಳಗಿನ 4 ತೋಟಗಾರಿಕೆ ಬೆಳೆ ಸೇರುತ್ತದೆ. ರೈತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಹೇಳಿದರು. ಈ ಬಾರಿ ಮುಂಗಾರು ಹಂಗಾಮು ನಿಧಾನವಾಗಿ ಆರಂಭವಾಗಬೇಕು-ಭತ್ತ ಬೆಳೆಯುವ ರೈತರು ದೀರ್ಘಾವಧಿ ತೆಗೆದುಕೊಳ್ಳುವ ಜಯ ಮತ್ತು ಬಿಆರ್‌೨೬೫೫ ತಳಿಯ ಸಸ್ಯ, ಉಳಿದ ಬಿತ್ತನೆ ಬೀಜವನ್ನು ಪಡೆಯುವುದು. ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಕೆಪಿಸಿಸಿ ವಕ್ತಾರ ಎಂ. ಲಪಿಣ್, ನಗರಕಾಂಗ್ರೆಸ್‌ಅಧ್ಯಪಿಆರ್. ಮೂರ್ತಿ, ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular