Tuesday, April 22, 2025
Google search engine

Homeರಾಜ್ಯತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಕೆ: ಮತ್ತೆ 1 ಅಡಿ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಕುಸಿತ

ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಕೆ: ಮತ್ತೆ 1 ಅಡಿ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಕುಸಿತ

ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ಮುಂದವರೆದಿದ್ದು, ಕೆ.ಆರ್.ಎಸ್ ಜಲಾಶಯದಲ್ಲಿ ಮತ್ತೆ ಒಂದು ಅಡಿ ನೀರು ಕುಸಿತವಾಗಿದೆ.

ಕೆ.ಆರ್.ಎಸ್ ಡ್ಯಾಂನಿಂದ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ.

ರೈತರ ಹೋರಾಟಕ್ಕೆ ಸೊಪ್ಪು ಹಾಕದೆ ತಮಿಳುನಾಡಿಗೆ ಸರ್ಕಾರ ನೀರು ಹರಿಸುತ್ತಿದೆ. ನಾಲೆ ಹಾಗೂ ತಮಿಳುನಾಡಿಗೆ ಸೇರಿ ಡ್ಯಾಂನಿಂದ 5973 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ.

ಡ್ಯಾಂ ಒಳ ಹರಿವಿನ ಪ್ರಮಾಣ 3503 ಕ್ಯೂಸೆಕ್ ಗೆ ಕುಸಿತ ಕಂಡಿದ್ದು, 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 100.92 ಅಡಿ ಮಾತ್ರ ನೀರು ಸಂಗ್ರಹವಿದೆ. ನಿನ್ನೆ 101 ಅಡಿಯಿದ್ದ ನೀರಿನ ಮಟ್ಟ 100 ಅಡಿಗೆ ಕುಸಿತವಾಗಿದೆ.

ಕೆ.ಆರ್.ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ- 124.80 ಅಡಿಗಳು

ಇಂದಿನ ಮಟ್ಟ- 100.92 ಅಡಿಗಳು

ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ

ಇಂದಿನ ಸಾಮರ್ಥ್ಯ- 23.539 ಟಿಎಂಸಿ

ಒಳಹರಿವು- 3503 ಕ್ಯೂಸೆಕ್

ಹೊರ ಹರಿವು- 5973 ಕ್ಯೂಸೆಕ್.

RELATED ARTICLES
- Advertisment -
Google search engine

Most Popular