ಮಂಡ್ಯ : ಸುಪ್ರೀಂ ಕೋರ್ಟ್ ಸೂಚನೆ ಬಳಿಕ ತಮಿಳುನಾಡಿಗೆ ಕೆ.ಆರ್.ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.
ರಾತ್ರಿಯಿಂದಲೇ ಡ್ಯಾಂನಿಂದ 11 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ತಮಿಳುನಾಡಿನ ಜೊತೆಗೆ ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೂ ನೀರು ಬಿಡುಗಡೆ ಮಾಡಲಾಗಿದೆ.
ಸ್ಥಳೀಯ ರೈತರನ್ನು ಸಮಾಧಾನಿಸಲು ವಿಸಿ ನಾಲೆಗೆ 1755 ಕ್ಯೂಸೆಕ್, ಆರ್ ಬಿಎಲ್ ನಾಲೆಗೆ 50 ಕ್ಯೂಸೆಕ್, ಎಲ್ ಬಿಎಲ್ ಎಲ್ ನಾಲೆಗೆ 58 ಕ್ಯೂಸೆಕ್, ದೇವರಾಜ ಅರಸು ನಾಲೆಗೆ 100 ಕ್ಯೂಸೆಕ್, ಎಂಸಿಸಿಡಬ್ಲ್ಯ ನಾಲೆಗೆ 50 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಇಂದಿನ krs ಡ್ಯಾಂನ ನೀರಿನ ಮಟ್ಟ
ನೀರಿನ ಮಟ್ಟ: 111.08
ಒಳಹರಿವು :3078
ಹೊರಹರಿವು : 11555
ಸಂಗ್ರಹ. : 33.820