ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ವಿಚಾರ ಸಂಬಂಧ ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನೀರು ಹರಿಸದಿದ್ರೆ ಆದೇಶ ಉಲ್ಲಂಘನೆ ಅಂತಾ ಸಚಿವರು ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ಲ ಅಂತಾ ಹೇಳಬಹುದು. ಹೌದು ನೀರು ಬಿಟ್ಟಿದ್ದಾರೆ ಅನಿವಾರ್ಯತೆ ಇದೆ ಅದನ್ನು ಒಪ್ಪುತ್ತೇನೆ. ಆದರೆ ಮಳೆ ಕೊರತೆಯಿಂದ ನಮ್ಮ ರೈತರ ಬೆಳೆ ನಾಶವಾಗ್ತಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ.
ಕಾವೇರಿ ನದಿ ಸಂಬಂಧ ಸಭೆಗಳಲ್ಲಿ ತಮಿಳುನಾಡಿನ ೧೦-೧೫ ಅಧಿಕಾರಿಗಳು ಭಾಗಿಯಾಗ್ತಾರೆ. ಆದರೆ ನಮ್ಮ ಅಧಿಕಾರಿಗಳು ಒಬ್ಬರೋ ಇಬ್ಬರೂ ಕಾಟಾಚಾರಕ್ಕೆ ಭಾಗಿಯಾಗುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೀರಿನ ಹಂಚಿಕೆ ಕೊರತೆ ಬಗ್ಗೆ ದೇವೇಗೌಡರು ಮಾತನಾಡಿದ್ರು. ನಿಲ್ಲೋಕಾಗದೇ ಇರುವ ಪರಿಸ್ಥಿಯಲ್ಲೂ ರಾಜ್ಯದ ಬಗ್ಗೆ ಮಾತನಾಡಿದ್ದರು. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲಿ ಹೋಗಿದ್ದಾರೆ.
ದೇವೇಗೌಡರು ಮಾತನಾಡಬೇಕಾದರೆ, ತಮಿಳುನಾಡು ಸದಸ್ಯರು ಪ್ರತಿಭಟಿಸಿದ್ರು. ಅದನ್ನು ಕಂಡು ದೇವೇಗೌಡರು ಎದ್ದು ನಿಂತು ಮಾತಾನಾಡಿದ್ದು ಅವರ ಕಮಿಟ್ ಮೆಂಟ್ ತೋರಿಸುತ್ತೆ. ದೇವೇಗೌಡರು ಕಾವೇರಿ ವಿಚಾರಕಲ್ಲ, ಮೈತ್ರಿ ಬಗ್ಗೆ ಡೆಲ್ಲಿಗೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ನಿನ್ನೆ, ಮೊನ್ನೆ ಬಂದವರು. ದೇವೇಗೌಡರ ಬಗ್ಗೆ ಮಾತನಾಡ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.