ಕೆಂಡಗಣ್ಣ ಸ್ವಾಮಿ ಗದ್ದಿಗೆ: ಹುಣಸೂರು ತಾಲೂಕು ಶ್ರೀ ಕೆಂಡಗಣ್ಣ ಸ್ವಾಮಿ ಗದ್ದಿಗೆಯ ಪ್ರಧಾನ ಆಗಮಿಕರಾದ ಶ್ರೀಯುತ ವೇದಬ್ರಹ್ಮ ಕರಿಬಸವ ಶಾಸ್ತ್ರಿಗಳು ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇವರಿಗೆ 65 ವರ್ಷ ವಯಸ್ಸಾಗಿತ್ತು. ಶ್ರೀಯುತರು ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಅಳಿಯಂದರು, ಇಬ್ಬರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.ಶ್ರೀಯುತರ ಅಂತ್ಯಕ್ರಿಯೆಯನ್ನು ಕೆಂಡಗಣ್ಣ ಸ್ವಾಮಿ ಗದ್ದಿಗೆಯ ಕುಟ್ಟವಾಡಿ ಗ್ರಾಮದಲ್ಲಿ ನಾಳೆ (ಆಗಸ್ಟ್ 15) ನೆರವೇರಿಸಲಾಗುವುದು.