ವಯನಾಡ್: ೩೦೦ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ವಯನಾಡ್ ಚೂರಲ್ ಮಲ, ಮುಂಡಕ್ಕೈ ಭೂಕುಸಿತ ಪ್ರದೇಶದಲ್ಲಿ ಕಳೆದ ೯ ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯು ವಾಪಸ್ ತೆರಳಿದೆ.
ಕಾರ್ಯಾಚರಣೆ ಮುಗಿಸಿ ಭಾಗಶಃ ವಾಪಸ್ ತೆರಳುವ ಸೇನೆಯ ನಿರ್ಧಾರವನ್ನು ಕೇರಳ ಲೋಕೋಪಯೋಗಿ ಸಚಿವ ಪಿ.ಎ ಮೊಹಮ್ಮದ್ ರಿಯಾಸ್ ತಿಳಿಸಿದರು. ಸೇನೆಯು ತನ್ನ ಕೆಲಸ ಮುಗಿಸಿದೆ. ಅವರಿಗೆ ನಾವು ಕೃತಜ್ಞ ಎಂದು ರಿಯಾಸ್ ಹೇಳಿದರು. ೧೯೦ ಅಡಿ ಉದ್ದದ ಬೈಲಿ ಸೇತುವೆಯನ್ನು ದಾಖಲೆ ಸಮಯದಲ್ಲಿ ನಿರ್ಮಿಸಿದೆ. ದುರಂತದಲ್ಲಿ ಧ್ವಂಸಗೊಂಡ ಮುಂಡಕ್ಕೈ, ಚೂರಲ್ಮಲ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಲ್ಲಿ ಸೇನೆಯು ಪ್ರಮುಖ ಪಾತ್ರ ವಹಿಸಿದೆ. ಒಂದೇ ದೇಹ ಒಂದೇ ಯೋಚನೆಯಂತೆ ಕೆಲಸ ಮಾಡಿದ ಅವರು ಇಲ್ಲಿಂದ ತೆರಳುತ್ತಿರುವುದರಿಂದ ನೋವಾಗುತ್ತಿದೆ ಎಂದು ರಿಯಾಸ್ ಹೇಳಿದರು. ಬಳಿಕ ಯೋಧರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು.