ಮಂಡ್ಯ : ಕೇರಳದ ವಯನಾಡು ಜಿಲ್ಲೆಯಲ್ಲಿ ಉಂಟಾದ ಭೂ ಕುಸಿತದಲ್ಲಿ ಮಂಡ್ಯ ಮೂಲದ ಮಹಿಳೆ ಹಾಗು ಕುಟುಂಬದವರು ಸಿಲುಕಿರುವ ಬಗ್ಗೆ ವರದಿಯಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿರಾಣಿ ಭೂ ಕುಸಿತದಲ್ಲಿ ತನ್ನ ಅತ್ತೆ ಹಾಗೂ ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದು, ಈಕೆಯೂ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ ಎನ್ನಲಾಗಿದೆ.
ಝಾನ್ಸಿರಾಣಿ ೨೦೨೦ರಲ್ಲಿ ಕೇರಳದ ಮಂಡಕಾಯಿ ಗ್ರಾಮದ ಅನಿಲ್ ಕುಮಾರ್ ಅವರನ್ನು ಮದುವೆಯಾಗಿದ್ದರು.
ಮದುವೆ ಬಳಿಕ ಈಕೆ ತನ್ನ ಗಂಡ, ಮಗು ಹಾಗು ಅತ್ತೆ ಮಾವನ ಜೊತೆ ವಯನಾಡು ಜಿಲ್ಲೆಯಲ್ಲಿ ವಾಸವಿದ್ದರು.
ಸೋಮವಾರ ರಾತ್ರಿ ನಡೆದ ಭೂಕುಸಿತ ಘಟನೆಯಲ್ಲಿ ಅತ್ತೆ ಲೀಲಾವತಿ, ಮಗ ನಿಹಾಲ್, ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಝಾನ್ಸಿ, ಪತಿ ಅನಿಲ್, ಮಾವ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದು, ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯಿಂದ ಕತ್ತರಘಟ್ಟದಲ್ಲಿರುವ ಝಾನ್ಸಿ ಮನೆಯಲ್ಲಿ ಶೋಕ ಮಡುಗಟ್ಟಿದೆ.