ವರದಿ :ಸ್ಟೀಫನ್ ಜೇಮ್ಸ್.
ನಮ್ಮದು ರೈತ ಪರ ಸರ್ಕಾರ; ರೈತರ ಆದಾಯ ಹೆಚ್ಚಿಸಲು ಬದ್ಧ; ಸಿಎಂ ಸಿದ್ಧರಾಮಯ್ಯ
ರೈತರು, ಕೃಷಿ ಇಲಾಖೆ ಮತ್ತು ಸಕ್ಕರೆ ಇಲಾಖೆ ಸಮನ್ವಯತೆಯಿಂದ ಇದ್ದರೇ, ಹೊಸ ಯೋಜನೆಗಳು ಮತ್ತು ಯಂತ್ರೋಪಕರಣಗಳ ಮಾಹಿತಿ ದೊರೆಯುತ್ತಿವೆ.ನಮ್ಮ ಸರ್ಕಾರ ಪರವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಬೆಳಗಾವಿಯಲ್ಲಿಂದು ಹೇಳಿದರು.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಯೋಜನೆಯಲ್ಲಿ ನೂತನ ಯೋಜನೆ, ಸಮಗ್ರ ಮಣ್ಣು, ನೀರಿನ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು, ರೈತರು, ಕೃಷಿ ಇಲಾಖೆ ಮತ್ತು ಸಕ್ಕರೆ ಇಲಾಖೆ ಸಮನ್ವಯತೆಯಿಂದ ಇದ್ದರೇ, ಹೊಸ ಯೋಜನೆಗಳು ಮತ್ತು ಯಂತ್ರೋಪಕರಣಗಳ ಮಾಹಿತಿ ದೊರೆಯುತ್ತಿವೆ. ನಮ್ಮ ದೇಶ ಕೃಷಿ ಪ್ರದಾನವಾಗಿದ್ದು, ಶೇಕಡಾ 60 ರಷ್ಟು ಕೃಷಿಯನ್ನೇ ಅವಲಂಬಿಸಿದೆ. ನಮ್ಮ ಸರ್ಕಾರ ರೈತಪರವಾಗಿದ್ದು, ರೈತರ ಆದಾಯವನ್ನು ಹೆಚ್ಚಿಸಲು ಬೇಕಾದ ಸಹಾಯವನ್ನು ಮಾಡಲಿದೆ. ರೈತರ ಮಣ್ಣಿನ ಆರೋಗ್ಯ, ನೀರಿನ ನಿರ್ವಹಣೆ ಮಾಡುತ್ತಿದೆ. ರಾಸಾಯನಿಕ ರಸಗೊಬ್ಬರಗಳು ಮಣ್ಣಿನ ಫಲವತ್ತತೆಯನ್ನು ಕಡಿಮೆಗೊಳಿಸುತ್ತದೆ. ಅದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು. ಹೆಚ್ಚಿನ ನೀರನ್ನು ಜಮೀನಿಗೆ ಬಳಸಬಾರದು. ನಮ್ಮ ಸರ್ಕಾರ ಹನಿ ನೀರಾವರಿ ಯೋಜನೆಗೆ ಹೆಚ್ಚಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಸಚಿವರಾದ ಚಲುವರಾಯಸ್ವಾಮಿ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.



