Friday, April 18, 2025
Google search engine

Homeಸ್ಥಳೀಯಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕುಗಳನ್ನು ಹುಣಸೂರು ಜಿಲ್ಲೆಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ: ಎಸ್.ಟಿ.ಸೋಮಶೇಖರ್

ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕುಗಳನ್ನು ಹುಣಸೂರು ಜಿಲ್ಲೆಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ: ಎಸ್.ಟಿ.ಸೋಮಶೇಖರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ- ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳನ್ನು ಹುಣಸೂರು ಜಿಲ್ಲೆಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್.ಟಿ.ಸೋಮಶೇಖರ್ ತಮ್ಮ ವಿರೋಧ ವ್ಯಕ್ತಪಡಿಸಿದರು.
ಕೆ.ಆರ್.ನಗರ ಪಟ್ಟಣದ ತಾಲ್ಲೂಕು ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇತ್ತೀಚೆಗೆ ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಅವರು ಹುಣಸೂರು ತಾಲ್ಲೂಕನ್ನು ಅರಸು ಅವರ ಹೆಸರಿನಲ್ಲಿ ಜಿಲ್ಲೆ ಕೇಂದ್ರ ಮಾಡುವಂತೆ ಹೇಳಿಕೆ ನೀಡಿದ್ದು, ಈ ಸಂಬಂಧ ಸುತ್ತಮುತ್ತಲಿನ ತಾಲ್ಲೂಕುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೈಮುಲ್ ನಿರ್ದೇಶಕ ಎಸ್.ಟಿ.ಸೋಮಶೇಖರ್, ನಾವು ಹುಣಸೂರು ಜಿಲ್ಲೆಯಾಗುವುದಕ್ಕೆ ನಮ್ಮ ವಿರೋಧವಿಲ್ಲ ಅದಕ್ಕೆ ನಮ್ಮದು ಸಹಮತವಿದೆ ಆದರೆ ನಾವು ಹುಣಸೂರು ಜಿಲ್ಲೆಗೆ ಸೇರ್ಪಡೆಯಾಗುವುದಕ್ಕೆ ನಮ್ಮ ವಿರೋಧವಿದೆ ಎಂದರು.
ನಮ್ಮ ತಾಲ್ಲೋಕಿನಲ್ಲಿ ಇದುವರೆವಿಗೂ ಈ ಸಂಬಂಧ ಯಾವುದೇ ರೀತಿಯ ಸಭೆಗಳು ನಡೆದಿಲ್ಲ . ಜೊತೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಜನಸಾಮಾನ್ಯರ ಅಭಿಪ್ರಾಯ ಮತ್ತು ಇಲ್ಲಿನ ಹಾಲಿ ಶಾಸಕರ ಮತ್ತು ಮಾಜಿ ಶಾಸಕರ ಹಾಗೂ ಇಲ್ಲಿನ ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ ಸಭೆ ಕರೆದು ಎಲ್ಲರ ಅಭಿಪ್ರಾಯ ಕೇಳಿ ಪರ ವಿರೋಧದ ಬಗ್ಗೆ ಚರ್ಚೆ ಮಾಡ ಬಹುದಿತ್ತು, ಆದರೆ ಕೃಷ್ಣರಾಜನಗರ ಎಂದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿದ ಊರು, ಅಲ್ಲದೆ ಮೈಸೂರು ಅರಸರು ರೈತರ ಹಿತಕ್ಕಾಗಿ ಕಾವೇರಿ‌ನದಿಗೆ ಅಣೆಕಟ್ಟೆ ಕಟ್ಟಿ ಚಾಮರಾಜ ನಾಲೆ ಸೇರಿದಂತೆ ಅನೇಕ ನಾಲೆಗಳನ್ನು ನಿರ್ಮಾಣ‌ ಮಾಡಿ ಕೃಷ್ಣರಾಜನಗರ ಭತ್ತದ ಕಣಜ ಎಂದು ರಾಜ್ಯಕ್ಕೆ ಮಾದರಿಯಾಗುವಂತೆ ಮಾಡಿದ ನಮ್ಮ ಮಹರಾಜರು, ಮೈಸೂರು ಹೆಸರಿನಲ್ಲಿದೆ ಹಲವಾರು ಸಂಗತಿಗಳು, ವಿಶೇಷತೆಗಳು, ಮೈಸೂರು ಪಾಕ್, ಮೈಸೂರು ವಿಳ್ಯದೆಲೆ,‌ ಮೈಸೂರು ಮಲ್ಲಿಗೆ, ಮೈಸೂರು ಪೇಟ ಸೇರಿದಂತೆ ಅನೇಕ ವಿವಿದ ಮಾದರಿಗೆ ಹೆಸರುಗಳ ಜೊತೆಗೆ ನಮ್ಮ‌ಪರಂಪರೆ ಸಾರುವುದು ಇದ್ದು ಇದನ್ನೆಲ್ಲ ಗಮಿಸಿದೇ ಏಕಾಏಕಿ ಹುಣಸೂರು ಜಿಲ್ಲೆಗೆ ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲೂಕನ್ನು ಸೇರಿಸುವುದು ಯಾವ ನ್ಯಾಯ, ಇದಕ್ಕೆ ಎರಡು ತಾಲೂಕಿನ ಜನತೆಯ ವಿರೋದವಿದೆ, ನೀವು ಹುಣಸೂರು ತಾಲೂಕನ್ನು ಜಿಲ್ಲೆ ಮಾಡಲೇ ಬೇಕೆಂದರೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಬಿಟ್ಟು ಉಳಿದ ತಾಲೂಕು ಸೇರಿಸಿ ಕೊಂಡು ಮಾಡಿ ನಮ್ಮಗಳ ಸಹಕಾರವಿದೆ ಎಂದು ಮನವಿ ಮಾಡಿದರು.
ನಮ್ಮ ಮಾಜಿ ಸಚಿವರಾದ ಸಾ.ರಾ.ಮಹೇಶ್ ನೂರಾರು ಕೋಟಿ‌ ಅನುದಾನ‌ ತಂದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ‌ ಕೆಲಸ ಮಾಡಿದ್ದಾರೆ. ತದ ನಂತರ ಅವರ ತಂದ ಎಷ್ಟೋ ಕಾಮಗಾರಿಗಳಿಗೆ ಈಗಿನ ಸರ್ಕಾರ ಹಣ‌ ನೀಡದೇ ಅರ್ದಕ್ಕೆ ಕಾಮಗಾರಿಗಳು ನಿಂತಿವೆ, ನೀವು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆ ಒಡನಾಟ ಇಟ್ಟಿಕೊಂಡಿದ್ದು ಹಣ ಬಿಡುಗಡೆ ಮಾಡಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಎಂದು ಮನವಿ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳಿ ಸೋಮು, ಮುಖಂಡ ಮಿರ್ಲೆ ಮೃತ್ಯಂಜಯ, ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular