Friday, April 18, 2025
Google search engine

Homeರಾಜಕೀಯನಾವು ನುಡಿದಂತೆ ನಡೆಯುತ್ತಿದ್ದೇವೆ: ಎಸ್. ಮಧು ಬಂಗಾರಪ್ಪ

ನಾವು ನುಡಿದಂತೆ ನಡೆಯುತ್ತಿದ್ದೇವೆ: ಎಸ್. ಮಧು ಬಂಗಾರಪ್ಪ

ಮಂಗಳೂರು: ಬಡವರಿಗೆ, ಮಹಿಳೆಯರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.

ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಕ್ಷದ ಕಾರ್ಯಕರ್ತರು ನಮ್ಮ ಅಧಿಕಾರದ ಪಾಲುದಾರರು. ಈ ಬಾರಿ ಮೈತ್ರಿಗೆ ಅವಕಾಶ ಕೊಡದೇ ರಾಜ್ಯದ ಜನರು 136 ಜನರನ್ನು ಗೆಲ್ಲಿಸಿ, ಸಂಪೂರ್ಣ ಬಹುಮತ ನೀಡಿದ್ದಾರೆ. ಜನರು ವಿಶ್ವಾಸವಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸರಿ ಎಂದು ತೀರ್ಮಾನ ಮಾಡಿದ್ದಾರೆ. ಜನರಿಗೆ ಸರ್ಕಾರದ ಫಲ ದೊರೆಯುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಂತ ಹಂತವಾಗಿ ಜಾರಿಯಾಗುತ್ತಿದೆ ಎಂದರು.

ಬಿಜೆಪಿಯವರು ಏನೇನೋ ಹೇಳಬಹುದು. ವಿಧಾನಸೌಧದಲ್ಲಿ ನೀವೆಲ್ಲ ನೋಡುತ್ತಿದ್ದಿರಿ. ಅವರ ಪರಿಸ್ಥಿತಿ‌ ಹೇಗಿದೆ, ಇಷ್ಟು ದಿನ ಭಾವನಾತ್ಮಕ ವಿಚಾರದಲ್ಲಿ ನಡೆದುಕೊಳ್ಳುತ್ತಿದ್ದರು. ಇವತ್ತು ಮಾನಸಿಕ ಅಸ್ವಸ್ಥತೆಯನ್ನು ತೋರಿಸಿಕೊಳ್ಳುತ್ತಿದ್ದಾರೆ. ಜನರು ಮುಂದಿನ ದಿನಗಳಲ್ಲಿ ಶಿಕ್ಷೆ ಕೊಡುತ್ತಾರೆ ಎಂದರು.

ನಮಗೆ ಇಲ್ಲಿ ಗೆಲುವು ಆಗಿಲ್ಲ. ‌ಸ್ವಲ್ಪ ಹೆಚ್ಚು ಕಮ್ಮಿ ಆಗಿರಬಹುದು. ಆದರೆ ನಾವು ನಿಮ್ಮ ಜೊತೆಗೆ ಇದ್ದೇವೆ. ಸರ್ಕಾರ ನಮ್ಮದಿದೆ. ನೀವು ನಮ್ಮ ಜೊತೆಗೆ ಇರಬೇಕು.‌ ಎಲ್ಲ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಿ ಮಾತು ಕೊಡುತ್ತಿದ್ದೇವೆ. ಮುಂಬರುವ ಚುನಾವಣೆಗಳನ್ನು ಎಲ್ಲರೂ ಎದುರಿಸೋಣ. ಅಧಿಕಾರ ಇಲ್ಲದ ವೇಳೆ ನೀವು ಹೋರಾಟ ಮಾಡಿಕೊಂಡು ಬಂದಿದ್ದಿರಿ. ಈಗ ನಮಗೆ ಅಧಿಕಾರ ಇದೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಕಾರ್ಯಕರ್ತರನ್ನು ಹುರುದುಂಬಿಸಿದರು.

RELATED ARTICLES
- Advertisment -
Google search engine

Most Popular