ಮಂಡ್ಯ: ನುಡೆದಂತೆ ನಾವು ನಡೆದು ಕಾರ್ಯ ನಿರ್ವಹಿಸುತ್ತಿದ್ದೇವೆ. ಎಲ್ಲಾ ಇಲಾಖೆಯಲ್ಲಿ ಸೌಲಭ್ಯಗಳನ್ನು ನಿಲ್ಲಿಸಿಲ್ಲ. ಕೆಲವರು ನಮ್ಮ ಯೋಜನೆಗಳನ್ನು ಟೀಕಿಸಿದ್ದಾರೆ. ಜೆಡಿಎಸ್ ಗೆ ಮಾತ್ರವಲ್ಲ ಎಲ್ಲಾ ಸಾಮಾನ್ಯರಿಗೂ ಉಚಿತ ಎಂದು ಸಚಿವ ಎನ್ ಚೆಲುವರಾಯಸ್ವಾಮಿ ತಿಳಿಸಿದರು.
ಕೆ.ಆರ್.ಪೇಟೆಯ ಖಾಸಗಿ ಸಮುದಾಯ ಭವನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
5 ಗ್ಯಾರಂಟಿ ಯೋಜನೆಗಳಿಂದ 56ಸಾವಿರ ಕೋಟಿ ಈ ರಾಜ್ಯಕ್ಕೆ ಖರ್ಚಾಗಿದೆ. ಮುಂದಿನ ವರ್ಷದಿಂದ 69 ಸಾವಿರ ಕೋಟಿಯಾಗುತ್ತೆ. 69 ಸಾವಿರ ಕೋಟಿ ಫ್ರೀ ಅಂದ್ರೆ ಫ್ರೀ ಅಲ್ಲ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಸಾರಿಗೆ ಇಲಾಖೆಗೆ ಸರ್ಕಾರದ ಬೊಕ್ಕಸಕ್ಕೆ ಹೊಗ್ತಿದೆ. ಸರ್ಕಾರದ ಮೇಲೆ 69 ಸಾವಿರ ಕೋಟಿ ಬಿಳ್ತಿದೆ. ಬಡ್ಡಿ ರಹಿತ ಸಾಲವನ್ನು ಕೊಡ್ತಿದ್ದೇವೆ. ಶಕ್ತಿ ಯೋಜನೆಯಲ್ಲಿ ರಾಜ್ಯದ ಉದ್ದಗಲಕ್ಕೂ ಐಡಿ ಕಾರ್ಡ್ ತೋರಿಸಿದ್ರೆ ಸಂಚಾರ ಮಾಡಬಹುದು ಎಂದರು.
ಬರಗಾಲ ಎದುರಾಗಿದೆ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಈಗಾಗಲೇ ಬರಗಾಲ ಘೋಷಣೆಯಗಿದೆ 223 ಗುರ್ತಿಸಿ ಕೇಂದ್ರಕ್ಕೆ ವರದಿ ಕಳಿಸಿದ್ದೇವೆ. ಬರಗಾಲದ ಪರಿಹಾರ ತಕ್ಷಣವೇ ಕೇಂದ್ರ ಕೊಡ್ತಿತ್ತು. ಆದ್ರೆ ಇದೀಗಾ ಕೇಂದ್ರ ನಮ್ಮ ತೆರಿಗೆ ಕೊಡ್ತಿಲ್ಲ. 4.30000 ಕೋಟಿ ನಮ್ಮ ರಾಜ್ಯದಿಂದ ತೆರಿಗೆ ಹಣ ಹೋಗ್ತಿದೆ. ಎಲ್ಲಾ ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಬನ್ನಿ ಪ್ರತಿಭಟನೆ ಅಂತ ಮನವಿ ಮಾಡಿದ್ವಿ. ಕರ್ನಾಟಕ ಹೆಚ್ಚು ಟ್ಯಾಕ್ಸ್ ಕಟ್ಟುತ್ತೆ, ಬರಿ 50 ಸಾವಿರ ಕೋಟಿ ಮಾತ್ರ. ಸಾಮಾನ್ಯ ಜನರಿಗೆ ಅನ್ಯಾಯ ಆಗ್ತಿದೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತಿರ್ಮಾನ ತೆಗೆದುಕೊಳ್ಳಿ ಎಂದರು.
15 ಹಣಕಾಸಿನ ತಿರ್ಮಾನಕ್ಕೆ ಕೇಂದ್ರ ಬದ್ದವಾಗಿಲ್ಲ. 11 ಸಾವಿರ ಕೋಟಿ ಕೊಟ್ಟಿಲ್ಲ. ಬರಗಾಲದ 18 ಸಾವಿರ ಕೋಟಿ ಕೇಳಿದ್ರು ಕೊಟ್ಟಿಲ್ಲ. ಒಂದು ಸಭೆ ಕೂಡ ಮಾಡಿಲ್ಲ. ಕೇಂದ್ರದಿಂದ ಅಧಿಕಾರಿಗಳು ಬಂದು ವರದಿ ಕೊಟ್ಟಿರುವುದು. ಸಿಎಂ ಡಿಸಿಎಂ ಕುಳಿತು ರಾಜ್ಯ ಸರ್ಕಾರದಿಂದ 32 ಲಕ್ಷ ರೈತರಿಗೆ 2 ಸಾವಿರ ಹಣ ಹಾಕಿದ್ದಿವೇ ಎಂದು ಹೇಳಿದರು.
ಇವತ್ತಿನ ಸರ್ಕಾರ ಚುನಾವಣೆಗೆ ಮೊದಲು ಭರವಸೆ ಕೊಟ್ಟಿದ್ವಿ. ನಾವು ಗೆದ್ದು ಸರ್ಕಾರ ರಚನೆಯಾದ ಮೇಲೆ ಎಲ್ಲಾ ಯೋಜನೆ ಜಾರಿ ಮಾಡಿದ್ದೇವೆ. ರಾಷ್ಟ್ರದ ಅನೇಕ ರಾಜ್ಯ ಬೆಚ್ಚಿ ಬಿದ್ದಿದ್ದಾವೆ ಬರಗಾಲದ ಸಮಸ್ಯೆಗಳನ್ನು ನಿವಾರಿಸಿಕೊಂಡು ಹೋಗ್ತಿದ್ದೇವೆ. ಹಿಂದಿನ ಸರ್ಕಾರ ಬಿಜೆಪಿ ಇತ್ತು, ಕಾಂಗ್ರೆಸ್, ಬಿಜೆಪಿ ಅವರಿಗೆ ಅಭಿವೃದ್ಧಿಗೆ ಒಂದು ರೂ ಕೊಟ್ಟಿರಲಿಲ್ಲ. ನಾವು 10 ಕೋಟಿ ಕೊಟ್ಟಿದ್ದೇವೆ. ನರೇಂದ್ರ ಸ್ವಾಮಿ ಹಾಗೂ ನಾನು 20 20 ಕೋಟಿ ತಕೊಂಡಿದ್ದೇವೆ ಎಂದು ಹೇಳಿದರು.
ನಾವು ಹೆಚ್.ಟಿ.ಮಂಜು ಅವರನ್ನ ಬೇರೆ ಪಕ್ಷ ಅಂತ ಕಡೆಗಣಿಸಿಲ್ಲ. ಅಭಿವೃದ್ಧಿಗಾಗಿ ನಾವು ಕೆಲಸ ಮಾಡ್ತೇವೆ. ಚುನಾವಣೆ ಬಂದಾಗ ಅವರವರ ಕೆಲಸ ಮಾಡ್ತಾರೆ. ನಾನು ಕೆ.ಆರ್.ಪೇಟೆಗು ಗಮನ ಹರಿಸುತ್ತೇವೆ ಅಭಿವೃದ್ಧಿ ಮಾಡೋಣ. ಸಣ್ಣಪುಟ್ಟ ವ್ಯತ್ಯಾಸಗಳು ಇದ್ದರೆ ಸರಿಪಡಿಸೋಣ. ನಮ್ಮ ಸರ್ಕಾರ ಮುಂದಿನ ದಿನ ಹೆಚ್ಚು ಅಭಿವೃದ್ಧಿ ಹಾಗೂ ಕಾರ್ಯಕ್ರಮ ಜಾರಿ ಮಾಡ್ತೇವೆ ಎಂದು ಭರವಸೆ ನೀಡಿದರು.