ಮಂಡ್ಯ: ಒಬ್ಬ ತಾಯಿ ತನ್ನ ಮಕ್ಕಳನ್ನ ಉಪವಾಸ ಇಟ್ಟು ಪಕ್ಕದ ಮನೆಯ ಮಕ್ಕಳಿಗೆ ಊಟ ಕೊಡಲ್ಲ. ನಮ್ಮ ರೈತರಿಗೆ ನಮ್ಮ ಜನಕ್ಕೆ ಅನ್ಯಾಯ ಮಾಡಿ ಪಕ್ಕದ ರಾಜ್ಯಕ್ಕೆ ನೀರು ಕೊಟ್ಟರೆ ಒಪ್ಪಲು ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದರು.
ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ್ಮ ರೈತರಿಗೆ ಅನ್ಯಾಯ ಆಗ್ತಿದೆ. ಕುಡಿಯುವ ನೀರಿನ ಸಮಸ್ಯೆ ನಮ್ಮಲ್ಲಿದೆ. ಇದನ್ನ ಗಮನದಲ್ಲಿಟ್ಟಿಕೊಳ್ಳದೆ ಯಾವ ರೀತಿ ನೀರು ಬಿಡುಗಡೆ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಕಾವೇರಿ ವಿಚಾರದಲ್ಲಿ ಫಸ್ಟ್ ಧ್ವನಿ ಎತ್ತಿದ್ದೆ ನಾನು. ನಾವು ಎಲ್ಲಾ ಕಡೆ ಕಾವೇರಿ ನೀರಿನ ಸಮಸ್ಯೆ ಬಂದಾಗ ಮಾತನಾಡಿದ್ದೇವೆ. ಪ್ರತಿ ಬಾರಿ ತಮಿಳುನಾಡು, ಕರ್ನಾಟಕ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ಎಂದು ಹೇಳಿದರು.
ನಮ್ನ ಕಡೆಯಿಂದ ಸರಿಯಾಗಿ ಪ್ರಸೆಂಟ್ ಮಾಡುವುದರಲ್ಲಿ ವಿಫಲರಾಗಿದ್ದೇವೆ. ಯಾವ ಪ್ರಯತ್ನ ಮಾಡದೆ ತಮಿಳುನಾಡಿನವರು ಅರ್ಜಿ ಹಾಕಿದ ತಕ್ಷಣವೇ ನೀರು ಬಿಟ್ಟರೆ ರೈತರ ಗತಿ ಏನು? ಎಂದರು.
ಕಾವೇರಿ ನಮ್ಮ ತಾಯಿ ರಾಜಕೀಯವಾಗಿ ಯಾರು ನೋಡಬೇಡಿ. ನಮ್ಮ ರೈತರ ಹಿತವನ್ನು ಕಾಪಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಎಂಟ್ರಿ ಇಲ್ಲ. ರಾಜ್ಯ ಸರ್ಕಾರ ಇದನ್ನ ಸುಳ್ಳು ಹೇಳ್ತಿದೆ. ದಾರಿ ತಪ್ಪಿಸುವ ಕೆಲಸ ಆಗ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾವೇರಿ ಸಮಸ್ಯೆ ಇತ್ತು. ಅವಾಗಲು ಸುಪ್ರೀಂ ಕೋರ್ಟ್ ನೆಪ ಹೇಳಿ ತಮಿಳುನಾಡಿಗೆ ನೀರು ಕೊಟ್ಟಿದ್ರು. ಕೇಂದ್ರದ ನಿರ್ಧಾರಕ್ಕೆ ಅಂಬರೀಶ್ ರಾಜಿನಾಮೆ ಕೊಟ್ಟಿದ್ರು. ಇದನ್ನು ಪರಿಹಾರ ಮಾಡೋದಾಗಿದ್ರೆ ಆಗ್ಲೆ ಮಾಡಬಹುದಿತ್ತು ಎಂದು ಹೇಳಿದರು.
ಕಾವೇರಿ ಪ್ರಾಧಿಕಾರದಲ್ಲಿ ತಮಿಳುನಾಡಿನ ವಾಯ್ಸ್ ಹೆಚ್ಚಾಗಿ ಕೇಳ್ತಿದೆ. ಕೆಆರ್ ಎಸ್ ಡ್ಯಾಂ ನಿಂದ ಒಂದು ಹೂಳು ಎತ್ತುವುದಕ್ಕು ತಮಿಳುನಾಡಿನವರು ತಡೆಯುತ್ತಾರೆ ನಾವು ಸುಮ್ಮನಿರಬೇಕಾಗುತ್ತೆ. ಕೆಆರ್ ಎಸ್ ನಲ್ಲಿ ಹೂಳು ಎತ್ತಿದ್ರೆ ಹೆಚ್ಚು ನೀರು ಸಂಗ್ರಹ ಮಾಡಬಹುದು. ಅದಕ್ಕೂ ತಮಿಳುನಾಡು ಒಪ್ಪಲ್ಲ. ಪ್ರತಿ ಬಾರಿ ನಮ್ಮ ರೈತರಿಗೆ ಅನ್ಯಾಯ ಆಗುತ್ತೆ. ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.