ಮಂಡ್ಯ: ನಾವು 100 ದಿನಗಳನ್ನು ಪೂರೈಸಿದ್ದೇವೆ. ನಾವು ನೀಡಿದ ಐದು ಭರವಸೆಗಳ ಪೈಕಿ ನಾಲ್ಕು ಭರವಸೆ ಈಡೇರಿಸಿದ್ದೇವೆ. ನಾಳೆ ನಾಲ್ಕನೇ ಭರವಸೆ ಈಡೇರಲಿದೆ. 100 ದಿನಗಳ ಆಡಳಿತದಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದ್ದೇವೆ. ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭ ಮಾಡಿದ್ದೇವೆ ಎಂದರು.
ಕಾವೇರಿ ವಿಚಾರದಲ್ಲಿ ಇಂದು ಸಭೆ ಇದೆ. ನಾಳೆ ನೀರು ನಿರ್ವಹಣಾ ಮಂಡಳಿಯ ಸಭೆ ಇದೆ. ಸೆ.1 ರಂದು ಸುಪ್ರೀಂಕೋರ್ಟ್ ವಿಚಾರಣೆ ಇದೆ. ನಮ್ಮ ಸರ್ಕಾರ ಕುಡಿಯುವ ನೀರು ಹಾಗೂ ಬೆಳೆದಿರುವ ಬೆಳಗಳನ್ನು ಉಳಿಸಿಕೊಳ್ಳಲು ಮುಂದಾಗಿದ್ದೇವೆ. ಸಂಕಷ್ಟ ಸೂತ್ರವನ್ನು ನಿರ್ಧಾರ ಮಾಡದೇ ಇರುವುದು ಸಮಸ್ಯೆಗೆ ಕಾರಣ. ನಮ್ಮ ಸಮಸ್ಯೆಗಳ ಬಗ್ಗೆ ತಜ್ಞರು ಕೋರ್ಟ್ ಗೆ ತಿಳಿಸಲಿದ್ದಾರೆ ಎಂದರು.
ಸಿಐಡಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಇನ್ನೂ ಸಿಐಡಿ ವರದಿ ಬಂದಿಲ್ಲ. ಇನ್ನೂ ಸೀರಿಯಸ್ ಆಗಿ ತನಿಖೆ ಆಗ್ತಾ ಇದೆ ಅಂತಾ ಹೇಳಿದ್ದಾರೆ. ಜೆಡಿಎಸ್ ನವರು ಏಳು ಜನ ಗೆದ್ದಿದ್ದಾಗ ನೆಮ್ಮದಿ ಆಗಿ ಇದ್ದೋ ಅಂತಾ ಇದೆ. ಆ ವಿಚಾರ ಸುಳ್ಳು ಇರಬೇಕು. ಕುಮಾರಸ್ವಾಮಿ ಅವರನ್ನೇ ಕೇಳಿ ಹೇಳ್ತಾರೆ. ಅವರೇ ಹೇಳ್ತಾರೆ ನಾನು ಯಾವಾಗಲೂ ಸತ್ಯ ಹೇಳ್ತೀನಿ ಅಂತಾ. ಯಾರು ಮಾಡಿದ್ದಾರೆ ಎಂದು ಅವರೇ ಹೇಳ್ತಾರೆ. ಅವರು ನನ್ನ ಹೆಸರು ಹೇಳದೇ ಇದ್ರೆ ನಿದ್ದೆ ಬರಲ್ಲಾ ಅಂದಿದ್ದಾರೆ. ಅವರಿಗೆ ನನ್ನ ಹೆಸರು ಹೇಳದೆ ಇದ್ರೆ ನಿದ್ದೆ ಬರಲ್ಲ ಎಂದು ಕಿಡಿಕಾರಿದರು.
ರೈತರಿಗಾಗಿ 6ನೇ ಗ್ಯಾರಂಟಿ ಕೊಡಲಿ ಹೆಚ್ ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಹೇಳಿ ಕೇಳಿ ನಾವು ಗ್ಯಾರಂಟಿ ಘೋಷಣೆ ಮಾಡಬೇಕಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ರಾ.? ಅವರನ್ನು ಕೇಳಿ ನಾವು ಕೊಡುವ ಅವಶ್ಯಕತೆ ಇಲ್ಲ. ನಾವು ಹೇಳಿದ ಭರವಸೆ ಈಡೇರಿಸುತ್ತೇವೆ. ಬಿಜೆಪಿ ಜೆಡಿಎಸ್ ನೀಡಿದ್ದನ್ನು ನಾವು ಈಡೇರಿಸೋಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಸೆ. 2ಕ್ಕೆ ಬರ ಪ್ರದೇಶ ಘೋಷಣೆ
ರಾಜ್ಯದಲ್ಲಿ ಮೋಡ ಬಿತ್ತನೆ ವಿಚಾರವಾಗಿ ಮಾತನಾಡಿ, ಸದ್ಯ ಮೋಡ ಭಿತ್ತನೆ ಮಾಡುವ ಆಲೋಚನೆ ನಮ್ಮ ಮುಂದೆ ಇಲ್ಲ. ಹಿಂದೆ ಎರಡು ಮೂರು ಭಾರಿ ಮೋಡ ಭಿತ್ತನೆ ಮಾಡಿರೋದು ಫಲ ನೀಡಿಲ್ಲ. ಈಗಾಗಲೇ ಬರ ಅಧ್ಯಯನ ಮಾಡುತ್ತಿದ್ದೇವೆ. ಎಷ್ಟು ತಾಲೂಕಿನಲ್ಲಿ ಸಮಸ್ಯೆ ಆಗಿದೆ ಎನ್ನೋದು ನೋಡ್ತಾ ಇದೀವಿ. ಸೆ. 2ಕ್ಕೆ ಯಾವ ತಾಲೂಕು ಬರಪ್ರದೇಶ ಎಂದು ಘೋಷಣೆ ಮಾಡ್ತೀವಿ ಎಂದು ಮಾಹಿತಿ ನೀಡಿದರು.
ನಮ್ಮ ಸಿದ್ದಾಂತ ಒಪ್ಪಿ ಬರೋರು ಬರಲಿ
ಸದ್ಯ ಆಪರೇಷನ್ ಹಸ್ತ ಬೇಕಾಗಿಲ್ಲ, ನಾವೇ 135 ಇದ್ದೀವಿ. ಬೇರೆ ಅವರು ಬರ್ತೀವಿ ಅಂದ್ರೆ ಕರೆದುಕೊಳ್ಳುತ್ತೇವೆ. ನಮ್ಮ ಸಿದ್ದಾಂತ ಒಪ್ಪಿ ಬರೋರು ಬರಲಿ. ನಾವು ಯಾರ ಮನೆ ಬಳಿ ಹೋಗಿ ಕದ ತಟ್ಟಿಲ್ಲ, ನಾವು ಯಾರನ್ನು ಕೇಳಿಲ್ಲ. ಬೇರೆ ಅವರಿಗೆ ಅವರಿರುವ ಪಕ್ಷದಲ್ಲಿ ರಾಜಕೀಯ ಸ್ಥಿರತೆ ಇರಲ್ಲ ಅಂದರೆ ಬರಲಿ. ಮಂಡ್ಯದಲ್ಲಿ ಮಾಜಿ ಶಾಸಕರು ಒಂದಿಬ್ಬರು ಇದ್ದಾರೆ. ಯಾರು ಬರ್ತಾರೆ ಅಂತಾ ಆ ಮೇಲೆ ಹೇಳ್ತೀನಿ ಎಂದು ತಿಳಿಸಿದರು.