ಹುಣಸೂರು: ಅನುಭವ ಮಂಟಪದ ಮೂಲಕ ಚೆರ್ಚಿಸಿ ಶರಣರು ನೀಡಿದ ವಚನ ಸಾಹಿತ್ಯವನ್ನು ಸ್ಮರಿಸುವ ಪ್ರಯತ್ನ ನಮ್ಮದಾಗಬೇಕು ಎಂದು ತಹಶಿಲ್ದಾರ್ ಮಂಜುನಾಥ್ ತಿಳಿಸಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮೂರು ಮಡಿವಾಳ ಮಾಚಿದೇವಯ್ಯ, ಸವಿತಾ ಮಹರ್ಷಿ, ಕಾಯಕ ಶರಣರು ಮಹನೀಯರ ಜಯಂತಿಯಲ್ಲಿ ಮಾತನಾಡಿದ ಅವರು ಮಡಿವಾಳ ಮಾಚಯ್ಯ, ಸೇರಿದಂತೆ, ಸಮಾಜದ ಸೂಕ್ಷ್ಮ ಸಂಗತಿಯನ್ನು ಒಂದೇ ಶೂರಿನಡಿ ಚೆರ್ಚಿಸಿ ಕಾಯಕವೇ ಕೈಲಾಸ ಎಂಬುವುದನ್ನು ತೋರಿಸಿ ಕೊಟ್ಟ ಅವರ ಹೋರಾಟ ನಮಗೆ ದಾರಿ ದೀಪ. ಅವರ ಆದರ್ಶ, ಮೌಲ್ಯಗಳ ನಾವುಗಳು ಅನುಸರಿಸಬೇಕಿದೆ ಎಂದರು.
ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ದೇವರಾಜ ಅರಸು ಹುಟ್ಟಿದ ನಾಡಿನಲ್ಲಿ ಸಣ್ಣ,ಸಣ್ಣ, ಸಮಾಜದ ಬದುಕು ಇನ್ನೂ ಜೀವಂತವಿದ್ದು ಹಳ್ಳಿ ಗಾಡಿನ ಜನರ ಜೀವನ ಕಣ್ಣೀರು ತರಿಸುವಂತಿದೆ. ಈಗಲೂ ಜೀವಿಸಲು ಸ್ವಂತ ಮನೆ, ನಿವೇಶನವಿಲ್ಲ. ಈಗಲಾದರೂ ಸರಕಾರ ಮೂಲಭೂತ ಸೌಕರ್ಯಕ್ಕೆ ಮುಂದಾಗಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಹೊನ್ನಪ್ಪ ಮಾತನಾಡಿ,12ನೇ ಶತಮಾನದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿತ್ತು. ಆ ಕಾಲದಲ್ಲೆ ಬಸವಣ್ಣ ಸಮಾನತೆಗೆ ಒತ್ತು ನೀಡಲು. ಎಲ್ಲಾ ತಳ ಸಮುದಾಯದ ಮಹನೀಯರನ್ನು ಒಗ್ಗೂಡಿಸುವ ಮಾಡಿ ಸಫಲರಾದರು. ದೇಶವನ್ನು ಕಟ್ಟಿದ್ದು ತಳ ಸಮಾಜದವರೇ ಆದರೂ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ನಮ್ಮನ್ನೆ ಮರೆತಿದ್ದಾರೆ. ಚುನಸವಣೆ ಸಂದರ್ಭದಲ್ಲಿ ಮಾತ್ರ ನೆನಪಿಕೊಳ್ಳುವವರ ಬಗ್ಗೆ ನಾವು ಜಸಗೃತರಾಗಬೇಕಿದೆ ಎಂದರು.
ಸವಿತ ಸಮಾಜದ ಜಲೇಂದ್ರ ಮಾತನಾಡಿ, ನಮ್ಮ ಸಮಾಜದಲ್ಲಿ ಅಪ್ಪಣ್ಣ, ಮಹರ್ಷಿ ಯಂತ ಮಹನೀಯರ. ಸವಿತಾ ಸಮಾಜ ಶುಚಿಗೆ ಆದ್ಯತೆ ನೀಡುತ್ತದೆ.ಈಗಲೂ ನೀಡುತ್ತಿದ್ದಾರೆ. ಸಮಾಜದಲ್ಲಿ ಎಲ್ಲರು ನಮಗೆ ತಲೆ ಬಾಗುತ್ತಾರೆ. ಆದರೆ ನಾವು ಉಳ್ಳವರ ನಡುವೆ ತಲೆ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಸರಕಾರ ನಮ್ಮ ಸಮುದಾಯಕ್ಕೆ ಆರ್ಥಿಕ ನೆರವು ನೀಡಬೇಕು ಎಂದರು.
ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ರವಿ ಮಾತನಾಡಿ, ಮಡಿವಾಳ ಮಾಚಯ್ಯನವರು ವಚನಗಳ ಮೈಲಕ ಸನಾಜದ ಸುಧಾರಣೆಗೆ ಮುಂದಾದರು. ಆದರೆ ನಮ್ಮ ಸಮಸಜ ಮಾತ್ರ ಇನ್ನೂ ಒಂದು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಒಂದು ಎಕ್ಕರೆ ಭೂಮಿಯೂ ಇಲ್ಲವಾಗಿದೆ ಎಂದು ನೊಂದು ನುಡುದರು.
ಕಾರ್ಯಕ್ರಮದಲ್ಲಿ ಇಒ ಹೊಂಗಯ್ಯ, ಉಪ ತಹಸೀಲ್ದಾರ್ ನರಸಿಂಹಯ್ಯ, ಮಡಿವಾಳ ತಾಲ್ಲೂಕು ಕಾರ್ಯದರ್ಶಿ ಬೋಳನಹಳ್ಳಿ ರಘು, ಸವಿತಾ ಸಮಾಜದ ಅಧ್ಯಕ್ಷ ಗೌರಿ ಶಂಕರ್, ನಾಡಹಬ್ಬ ಸಮಿತಿಯ ಜಯರಾಂ , ರಾಚಪ್ಪ, ಇದ್ದರು.