Tuesday, April 8, 2025
Google search engine

Homeರಾಜ್ಯದರ ಏರಿಕೆ, ಕಾಂಗ್ರೆಸ್ ಅಟ್ಟಹಾಸ ಜನರ ಮುಂದೆ ಇಡ್ತೇವೆ: ಬಿ.ವೈ.ವಿಜಯೇಂದ್ರ

ದರ ಏರಿಕೆ, ಕಾಂಗ್ರೆಸ್ ಅಟ್ಟಹಾಸ ಜನರ ಮುಂದೆ ಇಡ್ತೇವೆ: ಬಿ.ವೈ.ವಿಜಯೇಂದ್ರ

ಬೆಂಗಳೂರು, : ಭ್ರಷ್ಟ ಸರ್ಕಾರದ ದರ ಏರಿಕೆ ಹಾಗೂ ಅಟ್ಟಹಾಸವನ್ನು ಜನರ ಮುಂದಿಡಲು ಜನಾಕ್ರೋಶ ಯಾತ್ರೆ ಆರಂಭಿಸುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭ್ರಷ್ಟ ಸರ್ಕಾರದ ವಿರುದ್ಧ ಇಂದಿನಿಂದ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದೇವೆ. ಪ್ರಹ್ಲಾದ್ ಜೋಶಿಯವರು ಇಂದು ಮೈಸೂರಿನಲ್ಲಿ ಚಾಲನೆ ನೀಡುತ್ತಾರೆ. 4 ಹಂತಗಳಲ್ಲಿ ಹೋರಾಟ ಮಾಡುತ್ತಿದ್ದೇವೆ. ನಾವು ಪ್ರಾಮಾಣಿಕ ಹೋರಾಟ ಮಾಡುತ್ತಿದ್ದೇವೆ. ಈಗ ಯಾವುದೇ ಚುನಾವಣೆಗಳು ಇಲ್ಲದಿದ್ದರೂ ಜನರ ಪರ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಕಿಡಿಕಾರಿದರು. ಜನಾಕ್ರೋಶ ಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲಾ ನಾಯಕರೂ ಭಾಗವಹಿಸುತ್ತಾರೆ. ಪ್ರತೀ ಜಿಲ್ಲೆಗೂ ನಮ್ಮ ಜನಾಕ್ರೋಶ ಯಾತ್ರೆ ತಲುಪಲಿದೆ.

ಅಯೋಗ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ಮುಸ್ಲಿಮರ ಓಲೈಕೆ, ದಲಿತರಿಗೆ ದೋಖಾ ಮಾಡುತ್ತಿದೆ. ಈ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular