Thursday, April 3, 2025
Google search engine

Homeರಾಜಕೀಯನನ್ನ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ: ಡಿಸಿಎಂ ಡಿ.ಕೆ ಶಿವಕುಮಾರ್

ನನ್ನ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ: ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ನನ್ನ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ವಿರೋಧ ಬಣಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಕಾಂಗ್ರೆಸ್ ನನ್ನನ್ನು ಡಿಸಿಎಂ ಮಾಡಿದೆ. ಈ ಹಿಂದೆ ಪ್ರಚಾರ ಸಮಿತಿ ಅಧ್ಯಕ್ಷ ಆಗಿದ್ದೆ. ನನಗೆ ನನ್ನದೇ ಆದ ಜನಪ್ರಿಯತೆ ಇದೆ. ನನ್ನನ್ನು ದೆಹಲಿ ಚುನಾವಣೆಗೂ ಕರಿತಾರೆ. ಬಿಹಾರ, ಕೇರಳ ಚುನಾವಣೆಗೂ ಕರೀತಾರೆ. ತಮಿಳೂನಾಡು ಆಂಧ್ರ, ತೆಲಂಗಾಣ ಚುನಾವಣೆಗೂ ಕರೆಯುತ್ತಾರೆ. ನಾಯತಕತ್ವ ಇದೆ ಅಂತಾನೇ ನನ್ನನ್ನ ಕರೆಯುತ್ತಾರೆ ಎಂದರು.

ದೆಹಲಿ ಭೇಟಿ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನು ಭೇಟಿ ಆಗಿದ್ದೇನೆ. ಪಾರ್ಟಿ ಕಚೇರಿ ನಮಗೆ ದೇವಸ್ಥಾನ ಇದ್ದ ಹಾಗೆ. ಕಾಂಗ್ರೆಸ್ ಕಚೇರಿಗೆ ಹೋಗದೆ ಬಿಜೆಪಿ ಕಚೇರಿ, ಅಥವಾ ಕೇಶವ ಕೃಪಕ್ಕೆ ಹೋಗಲೇ? ಎಂದು ಪ್ರಶ್ನಿಸಿದರು.

ನಾನು ಕಚೇರಿಯಲ್ಲಿ ಎಲ್ಲರ ಜೊತೆಗೆ ಮಾತನಾಡಿ ಬಂದಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇಶಾ ಫೌಂಡೇಶನ್ ಗೆ ನಾನು ಹೋಗಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular