Saturday, April 19, 2025
Google search engine

Homeರಾಜಕೀಯ600 ಎಎಸ್ ಐ ಗಳಿಗೆ ಒಂದು ತಿಂಗಳಲ್ಲಿ ಪ್ರಮೋಷನ್ ಕೊಡ್ತೇವೆ: ಡಾ.ಜಿ.ಪರಮೇಶ್ವರ್

600 ಎಎಸ್ ಐ ಗಳಿಗೆ ಒಂದು ತಿಂಗಳಲ್ಲಿ ಪ್ರಮೋಷನ್ ಕೊಡ್ತೇವೆ: ಡಾ.ಜಿ.ಪರಮೇಶ್ವರ್

ಗದಗ:  ಕಳೆದ ಬಾರಿ ಗೃಹ ಸಚಿವನಾಗಿದ್ದಾಗ ಸುಮಾರು 12 ಸಾವಿರ ಸಿಬ್ಬಂದಿಗೆ ಪ್ರಮೋಷನ್ಸ್ ಕೊಟ್ಟಿದ್ದೆ. ಈಗ 6 ನೂರು ಎಎಸ್ ಐ ಗಳಿಗೆ ಒಂದು ತಿಂಗಳಲ್ಲಿ ಪ್ರಮೋಷನ್ ಕೊಡ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಿರಿಯ ಅಧಿಕಾರಿಗಳಿಗೆ ಪ್ರಮೋಷನ್ ನೀಡದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದರು.

ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,ಪೊಲೀಸ್ ಸಿಬ್ಬಂದಿಗೆ ವೇತನದಲ್ಲಿ ತಾರತಮ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭತ್ಯೆಯಲ್ಲಿ ಕೆಲವೊಂದು ಮಾಡಿದ್ದಾರೆ. 6ನೇ ವೇತನ ಆಯೋಗ ಜಾರಿಯಾದರೂ ಸಹ ಕೆಲವೊಂದು ಹಾಗೇ ಉಳಿದಿವೆ. ಅಂತವುಗಳನ್ನ ಪರಿಶೀಲನೆ ಮಾಡಿ ಮುಂದಿನ ದಿನಗಳಲ್ಲಿ ಮಾಡ್ತೇವೆ. ಉತ್ತರ ಕರ್ನಾಟಕದ ಪೊಲೀಸ್ ಸಿಬ್ಬಂದಿ ರೇಂಜ್ ನ ಹೊರಗಡೆ ಉಳಿದಿದ್ದಾರೆ. ಹೀಗಾಗಿ ನಿಯಮಗಳನ್ನು ಬದಲಾವಣೆ ಮಾಡುವ ಅಗತ್ಯತೆ ಇದೆ ಎಂದರು.

ಸನಾತನ ಧರ್ಮದ ವಿಚಾರವಾಗಿ ಸೈಲೆಂಟ್ ಆದ ಗೃಹ ಸಚಿವ ಡಾ.ಜಿ ಪರಮೇಶ್ವರ, ಆಯ್ತು ಬಿಡಿ ಎಲ್ಲಾ ವಿಶ್ಲೇಷಣೆ ಮಾಡಿಯಾಗಿದೆ ಮುಗಿದು ಹೋಗಿದೆ ಮತ್ಯಾಕೆ ಈ ವಿಚಾರ ಎಂದು ಹೇಳಿದ್ದಾರೆ.

ಡಿಎಂಕೆ ನಾಯಕ ಏ ರಾಜಾ ಅವರ ಹೇಳಿಕೆಗೆ ನಾನ್ಯಾಕೇ ಪ್ರತಿಕ್ರಿಯೆ ಕೊಡಬೇಕು ಎಂದ ಅವರು, ಆ ವಿಚಾರ ಬಿಟ್ಟು ಹೊಸ ವಿಚಾರ ಕೇಳಿ. ಸರಕಾರದ ಬಗ್ಗೆ ಅಷ್ಟೇ ಕೇಳಿ ಎಂದರು.

ದೇವೇಗೌಡರು ಹಾಗೂ ಅಮಿತ್ ಶಾ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಅದು ಅವರಿಗೆ ಬಿಟ್ಟಿದ್ದು. ಚುನಾವಣೆ ಬಳಿಕ ಅದರ ಎಫೆಕ್ಟ್ ಗೊತ್ತಾಗುತ್ತೆ. ಅವರ ಭೇಟಿಯಿಂದ ನಮಗೇನೂ ಆಗಲ್ಲ ನಾವಿನ್ನೂ ಸ್ಟ್ರಾಂಗ್ ಆಗ್ತೇವೆ ಎಂದು ತಿಳಿಸಿದರು.

ಗಾಂಧಿ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ‌ಮಾಡಿದ ಜಿ ಪರಮೇಶ್ವರ

ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಲಕ್ಕುಂಡಿ ಪ್ರಾಧಿಕಾರದ ಕಚೇರಿ ಉದ್ಘಾಟನೆ ವೇಳೆ ಗಾಂಧಿ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಬೂಟ್ ಧರಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪುಷ್ಪಾರ್ಚನೆ ಮಾಡಿದ್ದಾರೆ.

ಕಾನೂನು ಸಚಿವ ಎಚ್ ಕೆ ಪಾಟೀಲ್ ಹಾಗೂ ಶಾಸಕ ಜಿ ಎಸ್ ಪಾಟೀಲ್ ಚಪ್ಪಲಿ ತೆಗೆದು ಪುಷ್ಪಾರ್ಚನೆ ಮಾಡಿದ್ದಾರೆ. ಆದರೆ ಗೃಹ ಸಚಿವ ಜಿ ಪರಮೇಶ್ವರ ಬೂಟು ತೆಗೆಯದೇ ಪುಷ್ಪಾರ್ಚನೆ ಮಾಡಿ ಗಾಂಧಿ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

RELATED ARTICLES
- Advertisment -
Google search engine

Most Popular