ವರದಿ :ಸ್ಟೀಫನ್ ಜೇಮ್ಸ್.
ಸುವರ್ಣ ಸೌಧದೆದುರು ಸರ್ವೋದಯ ಸ್ವಯಂಸೇವಾ ಸಂಘದಿಂದ ಆಗ್ರಹ
ಸುವರ್ಣಸೌಧದೆದುರು ಭುವನೇಶ್ವರಿ ಮೂರ್ತಿ ಸ್ಥಾಪಿಸಿ…
ಇಲ್ಲದಿದ್ದರೇ ಮನೆ ಮನೆಗಳಿಂದ ಲೋಹ ಸಂಗ್ರಹ ಅಭಿಯಾನ…
ಸರ್ವೋದಯ ಸ್ವಯಂಸೇವಾ ಸಂಘದಿಂದ ಎಚ್ಚರಿಕೆ
ನಮಗೆ ಜಾಗ ಮಾತ್ರ ನೀಡಿ, ನಾವೇ ಮೂರ್ತಿ ಸ್ಥಾಪಿಸುತ್ತೇವೆ

ಇದೇ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯನವರು ಸುವರ್ಣಸೌಧದ ಎದುರು ನಾಡದೇವತೆ ಶ್ರೀ ಭುವನೇಶ್ವರಿಯ 108 ಅಡಿಯ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಮನೆ ಮನೆಯಿಂದ ಲೋಹ ಸಂಗ್ರಹಿಸಿ, ಕನ್ನಡ ಸಂಘಟನೆಗಳೇ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದು, ಇದಕ್ಕೆ ಜಾಗ ನೀಡಬೇಕೆಂದು ಸರ್ವೋದಯ ಸ್ವಯಂಸೇವಾ ಸಂಘ ಕನ್ನಡ ಪರ ಸಂಘಟನೆಯು ಸುವರ್ಣಸೌಧದ ಎದುರು ಪ್ರತಿಭಟನೆಯನ್ನು ನಡೆಸಿತು.
ಇಂದು ಸರ್ವೋದಯ ಸ್ವಯಂಸೇವಕ ಸಂಘ ಕನ್ನಡ ಪರ ಸಂಘಟನೆಯೂ ಸುವರ್ಣಸೌಧದ ಎದುರು ಪ್ರತಿಭಟನೆಯನ್ನು ನಡೆಸಿತು.

2023 ರಲ್ಲಿ ಸರ್ವೋದಯ ಸ್ವಯಂಸೇವಾ ಸಂಘ ಕನ್ನಡಪರ ಸಂಘಟನೆಯೂ ಸುವರ್ಣಸೌಧದ ಎದುರು ಬೆಂಗಳೂರು ವಿಧಾನಸೌಧದ ಮಾದರಿಯಲ್ಲಿ ನಾಡದೇವತೆ ಭುವನೇಶ್ವರಿಯ 108 ಅಡಿ ಕಂಚಿನ ಮೂರ್ತಿಯನ್ನು ಸ್ಥಾಪಿಸಬೇಕೆಂದು ಹಲವಾರು ಬಾರಿ ಪ್ರತಿಭಟಿಸಲಾಗಿದೆ. ಸರ್ಕಾರ ಇದೇ ಅಧಿವೇಶನದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಬೇಕು. ಗ್ಯಾರಂಟಿಗಳಿಗೆ ಸರ್ಕಾರ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಆದ್ದರಿಂದ ತಾಯಿ ಭುವನೇಶ್ವರಿಯ ಪ್ರತಿಮೆಯ ಹೊರೆ ಸರ್ಕಾರದ ಮೇಲೆ ಬೀಳದಿರಲೆಂದು ಕರ್ನಾಟಕದ ಪ್ರತಿ ಮನೆಗೆ ಭೇಟಿ ನೀಡಿ ಲೋಹಗಳನ್ನು ಸ್ವೀಕರಿಸುವ ಅಭಿಯಾನವನ್ನು ಪ್ರಾರಂಭಿಸುತ್ತೇವೆ. 100 ಕೋಟಿ ರೂಪಾಯಿ ಸಂಗ್ರಹ ಮಾಡುತ್ತೇವೆ. ಸರ್ಕಾರ ಮೂರ್ತಿ ಸ್ಥಾಪಿಸುವುದು ಬೇಡ. ನಮಗೆ ಜಾಗ ನೀಡಿ ಕನ್ನಡ ಸಂಘಟನೆಗಳೇ ಮೂರ್ತಿಯನ್ನು ಸ್ಥಾಪಿಸುತ್ತೇವೆಂದು ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಹೇಳಿದರು.
ಈ ಸಂದರ್ಭದಲ್ಲಿ ಸರ್ವೋದಯ ಸ್ವಯಂಸೇವಕ ಸಂಘ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ಧರು. ಹಿರಿಯ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಇವರ ನೇತೃತ್ವದಲ್ಲಿ
ಆನಂದ ಲೋಕರಿ, ಹನುಮಂತ ಬುಚಡಿ, ಗಣೇಶ ಯಂಡೋಳಿ, ವೆಂಕಟೇಶ ಕಾಂಬಳೆ, ಮಲ್ಲಪ್ಪ ಸೊಂಟಕ್ಕಿ, ಸಿದ್ದಪ್ಪ ಸುಗಂಧಿ,ಕೈ ಜೋಡಿಸಿದರು.

ಬೆಳಗಾವಿಯ ರಿಯಲ್ ಹೀರೋ ಶ್ರೀನಿವಾಸ್ ತಾಳುಕರ್ .

“ಯಾವ ಅಪೇಕ್ಷೆ ಇಲ್ಲದೆ ನಿಜವಾದ ಕನ್ನಡ ನಾಡು ನುಡಿ ಸೇವೆ ಮಾಡುತ್ತಿರುವ ಸುಮಾರು 20 ವರ್ಷದ ಹಿಂದೆ ‘ಬೆಳಗಾಂ’ ನ್ನು ‘ಬೆಳಗಾವಿ’ ಎಂದು ಬದಲಿದ ಕೀರ್ತಿ ಕನ್ನಡದ ಕಂದ ಕುಂದಾ ನಗರಿಯ ಶ್ರೀನಿವಾಸ್ ತಾಳುಕರ್ “.



