Monday, April 21, 2025
Google search engine

Homeಸ್ಥಳೀಯನಾಡ ಹಬ್ಬದ ದಸರಾದಲ್ಲಿ ನೇಕಾರನ ನೈಪುಣ್ಯತೆ: 36 ಗಂಟೆಗಳ ನಿರಂತರ ನೇಯ್ಗೆ

ನಾಡ ಹಬ್ಬದ ದಸರಾದಲ್ಲಿ ನೇಕಾರನ ನೈಪುಣ್ಯತೆ: 36 ಗಂಟೆಗಳ ನಿರಂತರ ನೇಯ್ಗೆ

ಕರ್ನಾಟಕ ಸರ್ಕಾರ ಕೈಮಗ್ಗ ಮತ್ತು ಜವಳಿ ಇಲಾಖೆ, ಕಾವೇರಿ ಹ್ಯಾಂಡ್ ಲುಮ್ಸ್ ಬೆಂಗಳೂರು ಇವರ ವತಿಯಿಂದ ಕೈಮುಗ್ಗ ಹಾಗೂ ಕೈಮಗ್ಗದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ನೇಕಾರರಿಗೆ, ನೇಕಾರ ಸಹಕಾರ ಸಂಘಗಳಿಗೆ ಅವಕಾಶ ನೀಡಲಾಗಿದೆ. ಈ ನಾಡಹಬ್ಬ ದಸರಾದ ವಿಶೇಷವಾಗಿ ಅನುಭವಿ ನೇಕಾರರಾದ ಶ್ರೀ ನಾಗರಾಜು ಬೆಂಗಳೂರು ಇವರು ತಮ್ಮ ನೇಕಾರಿಕೆ ನೈಪುಣ್ಯತೆಯ ಪ್ರದರ್ಶನಕ್ಕಾಗಿ 36 ಗಂಟೆಗಳ ಕಾಲ ನಿರಂತರವಾಗಿ ಕೈಮಗ್ಗ ದಲ್ಲಿ ಸೀರೆ ನೇಯೂವುದು ಎಂಬ ಒಂದು ವಿಶೇಷ ಸವಾಲಿಗೆ ಸಿದ್ಧರಾಗುತ್ತಿದ್ದಾರೆ.
ದಿನಾಂಕ 23. 10. 23 ಆಯುಧ ಪೂಜೆಯ ಹಬ್ಬದ ದಿನ ಬೆಳಗ್ಗೆ 6:00 ಗಂಟೆ ಯಿಂದ ದಿನಾಂಕ 24.10. 23 ರ ಸಂಜೆ 6:00 ಗಂಟೆಯವರೆಗೆ ಸರಿ ಸುಮಾರು 36 ಗಂಟೆಗಳ ನಿರಂತರ ಸೀರೇ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.
ನಮ್ಮ ಮೈಸೂರು ಸಂಸ್ಥಾನದ ಗಂಡುಬೇರುಂಡ ಲಾಂಛನವನ್ನು ತಿರುವುಬುಟ್ಟ ಕೌಶಲ್ಯವನ್ನು ಬಳಸಿ ಕೈಮಗ್ಗ ನೇಕಾರಿಕೆಯ ನೈಪುಣ್ಯತೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲಿದ್ದಾರೆ. ಈ ನೇಕಾರನಿಗೆ ತಂತ್ರಜ್ಞಾನದ ಸದ್ಬಳಕೆಯ ಮಾರ್ಗದರ್ಶನವನ್ನು ಎಲೆಕ್ಟ್ರಾನಿಕ್ ಜಕಾರ್ಡ್ ( electronic jacquard ) ಸಂಶೋಧಕರಾದ ಡಾ. ಪಾಂಡುರಂಗ ಎಚ್ ಟಿ, ಉಪನ್ಯಾಸಕರು ಸರ್ಕಾರಿ ಪಾಲಿಟೆಕ್ನಿಕ್ ಬೇಲೂರು ಇವರು ನೀಡುತ್ತಿದ್ದಾರೆ. ಡಾ. ಪಾಂಡುರಂಗ ಎಚ್ ಟಿ ಹಾಗೂ ಇವರ ಮಾರ್ಗದರ್ಶನದ ಒಂದು ತಂಡ ಕೈಮಗ್ಗ ಮತ್ತು ಎಲೆಕ್ಟ್ರಾನಿಕ್ ಜಕಾರ್ಡ್ ಸರಳವಾಗಿ ಸ್ಥಳಾಂತರಿಸಬಲ್ಲ ಹಾಗೂ ಬಹುಮನಿ ಕಟ್ಟಡಗಳಲ್ಲೂ ಅಳವಡಿಸಿಕೊಳ್ಳಬಲ್ಲ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದಾರೆ. ಇವರ ತಂತ್ರಜ್ಞಾನವು ಯುವಕರನ್ನು ನೈಕಾರಿಕೆಗೆ ಮರಳಿ ಆಕರ್ಷಿಸುವುದಕ್ಕಾಗಿ ಈಗಿನ ಕಾಲಘಟ್ಟಕ್ಕೆ ತಕ್ಕಂತೆ mobile app, Google drive, IOT ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ಈ ತಂತ್ರಜ್ಞಾನ ಸಿದ್ಧಪಡಿಸಲು ಸಿಜ್ಲಿಂಗ್ ಟೆಕ್ ಬೆಂಗಳೂರು, ಸಾಯಿ ಎಲೆಕ್ಟ್ರಾನಿಕ್ ಜಕಾರ್ಡ್ ಹಿಂದೂಪುರ, ಮತ್ತು ನೇಕಾರ ಮಿತ್ರ ಹ್ಯಾಪ್ ಹಿಂದುಪುರ ಇವರುಗಳು ಕೈಜೋಡಿಸಿದ್ದಾರೆ. ಈ ತಂಡದ ಪರಿಶ್ರಮವನ್ನು ಗುರುತಿಸಿ ಕರ್ನಾಟಕ ಸರ್ಕಾರದ ಜವಳಿ ಇಲಾಖೆಯು ಈ ನೇಕಾರನ ಕೌಶಲ್ಯದ ಸವಾಲನ್ನು ಹಾಗೂ ತಂತ್ರಜ್ಞಾನದ ಉಪಯೋಗಗಳನ್ನು ನೇಕಾರ ಬಂಧುಗಳಿಗೆ ತಿಳಿಸಲು ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ. 36 ಗಂಟೆಗಳ ನಿರಂತರ ಕೈ ಮಗ್ಗ ನೇಯುವ ಕೌಶಲ್ಯಕರವಾದ ನೈಪುಣ್ಯತೆಯ ಸವಾಲಿನ ಪ್ರದರ್ಶನ ದಸರಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ಪ್ರದರ್ಶನಕ್ಕೆ ಕರ್ನಾಟಕ ಸರ್ಕಾರದ ಕೈಮಗ್ಗ ಹಾಗೂ ಜವಳಿ ಇಲಾಖೆಯ ಆಯುಕ್ತರು, ಕಾವೇರಿ ಹ್ಯಾಂಡ್ಲೂಮ್ಸ್ ಅಧ್ಯಕ್ಷರು, ಜಂಟಿ ನಿರ್ದೇಶಕರು ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿಯವರು ಶುಭಕೋರಿದ್ದಾರೆ.

RELATED ARTICLES
- Advertisment -
Google search engine

Most Popular