Thursday, April 3, 2025
Google search engine

Homeಸಿನಿಮಾಖ್ಯಾತ ತಮಿಳುನಟ ಹಾಗೂ ನಿರ್ಮಾಪಕ ವಿಶಾಲ್ ಆರೋಗ್ಯದಲ್ಲಿ ಏರುಪೇರು; ಅಪೋಲೊ ಆಸ್ಪತ್ರೆಗೆ ದಾಖಲು

ಖ್ಯಾತ ತಮಿಳುನಟ ಹಾಗೂ ನಿರ್ಮಾಪಕ ವಿಶಾಲ್ ಆರೋಗ್ಯದಲ್ಲಿ ಏರುಪೇರು; ಅಪೋಲೊ ಆಸ್ಪತ್ರೆಗೆ ದಾಖಲು

ಚೆನ್ನೈ: ಖ್ಯಾತ ತಮಿಳುನಟ ಹಾಗೂ ನಿರ್ಮಾಪಕ ವಿಶಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ತಮ್ಮ ಮದಗಜರಾಜ ಚಿತ್ರದ ಪ್ರೋಮೋಷನ್ ನಲ್ಲಿ ಪಾಲ್ಗೊಂಡಿದ್ದ ನಟ ತೀವ್ರ ಅಸ್ವಸ್ಥತೆಗೀಡಾಗಿದ್ದರು. ಈ ವೇಳೆ ಅವರು ಮೈಕ್ ಹಿಡಿದಿದ್ದ ಕೈಗಳು ತೀವ್ರವಾಗಿ ನಡುಗುತ್ತಿದ್ದವು. ಮಾತುಗಳು ಕೂಡ ತೀವ್ರವಾಗಿ ತೊದಲುತ್ತಿದ್ದವು. ಇದು ವಿಶಾಲ್ ಅವರಿಗೆ ಏನೋ ಆಗಿದೆ ಎಂಬುದನ್ನು ಸಾಬೀತು ಪಡಿಸಿತ್ತು. ಅಲ್ಲದೆ ವಿಶಾಲ್ ಅವರ ಅಭಿಮಾನಿಗಳೂ ಕೂಡ ಅವರ ಆರೋಗ್ಯದ ಕುರಿತು ಆತಂಕಕ್ಕೀಡಾಗಿದ್ದರು.

ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದರಿಂದ ಅವರನ್ನು ಚೆನ್ನೈನ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅತೀಯಾದ ಜ್ವರ, ನಿಶ್ಯಕ್ತಿ

ಇನ್ನು ನಟ ವಿಶಾಲ್ ಅವರು ಅತಿಯಾದ ಜ್ವರ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅವರನ್ನು ಇದೀಗ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ವಿಶಾಲ್ ಗೆ ವೈರಲ್ ಫೀವರ್ ಇರುವ ಕುರಿತು ಸ್ಪಷ್ಟನೆ ನೀಡಿದ್ದು ಇದೇ ಕಾರಣಕ್ಕೆ ಅವರು ತೀವ್ರ ನಿಶ್ಯಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ಕೂಡ ನಟ ವಿಶಾಲ್ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ವಿಶಾಲ್ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಮತ್ತು ಕೆಲವು ದಿನಗಳವರೆಗೆ ಸಂಪೂರ್ಣ ಬೆಡ್ ರೆಸ್ಟ್ ಅಗತ್ಯವಿದೆ ಎಂದು ದೃಢಪಡಿಸಿದ್ದಾರೆ. ಇದಲ್ಲದೆ ವಿಶಾಲ್ ಕೆಲವು ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ವರದಿ ಹೇಳಿದೆ.

RELATED ARTICLES
- Advertisment -
Google search engine

Most Popular