Friday, April 18, 2025
Google search engine

Homeರಾಜಕೀಯಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದ್ರೆ ಹೇಗೆ ?: ಗೋವಿಂದ‌ ಕಾರಜೋಳ ಪ್ರಶ್ನೆ

ಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದ್ರೆ ಹೇಗೆ ?: ಗೋವಿಂದ‌ ಕಾರಜೋಳ ಪ್ರಶ್ನೆ

ಚಿತ್ರದುರ್ಗ: ಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದರೆ ಹೇಗೆ ಎಂದು ಮುಡಾದಲ್ಲಿ ನಡೆದ ಹಗರಣ ಕುರಿತು ಸಂಸದ ಗೋವಿಂದ‌ ಕಾರಜೋಳ ಪ್ರಶ್ನೆ ಎತ್ತಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡುವ ವೇಳೆ ಮೂಡ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು ಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದ್ರೆ ಹೇಗೆ..? ಬೇಲಿಯೇ ಎದ್ದು ಹೊಲ ಮೇದಂತೆ ಆಗಬಾರದು ಹಗರಣದಲ್ಲಿರುವವರು ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಬೇಕು, ಬಡವರಿಗೆ ಮನೆ ಕಟ್ಟಿಕೊಳ್ಳಲು ನಮ್ಮ ಹಿಂದಿನ ಸರಕಾರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿತ್ತು, ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಆದರೆ ಆ ಉದ್ದೇಶ ಮರೆತು ಅಧಿಕಾರಿಗಳು, ಇನ್ನುಳಿದವರು ಸೇರಿ ಹಗರಣ ಮಾಡ್ತಿದ್ದಾರೆ ಆದರೆ ಇದು ತಪ್ಪು ಯಾವುದೇ ಸರಕಾರ ಹಗರಣ ನಡೆಸಿದ್ರೂ ತನಿಖೆ ನಡೆಸಬೇಕು ಜೊತೆಗೆ ನಿವೃತ್ತ ನ್ಯಾಯಾಧೀಶರ ಕಮೀಶನ್ ನೇಮಕ‌ ಮಾಡಬೇಕು ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ತನಿಖೆ ಆಗಬೇಕು ಎಂದು ಹೇಳಿದರು.

ಬಿ. ನಾಗೇಂದ್ರ ನಿವಾಸದ ಮೇಲೆ ಇಡಿ ದಾಳಿ ಕುರಿತು ಸಚಿವ ಶರಣಪ್ರಕಾಶ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಶರಣಪ್ರಕಾಶ ಪಾಟೀಲ್ ಕಾನೂನು ತಜ್ಞರಿರಬಹುದು ಆದ್ರೆ ನಮಗೆ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತೆ, ನಮ್ಮ ಮೇಲೆ ಆಪಾದನೆ ಬಂದಾಗ ನಮಗೆ ರೋಲ್ ಮಾಡೆಲ್ ಆಗಿದ್ದವರು ರಾಮಕೃಷ್ಣ ಹೆಗಡೆಯವರು, ಟೆಲಿಫೋನ್ ಕದ್ದಾಲಿಗೆ ಆರೋಪ ಬಂದಾಗ ರಾಜಿನಾಮೆ‌ ನೀಡಿದ್ರು, ರೈಲ್ವೆ ಅಪಘಾತವಾದಾಗ ಕೇಂದ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಜಿನಾಮೆ ನೀಡಿದ್ರು ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣ ಸಣ್ಣ ಹಗರಣ ಅಲ್ಲ ಸರಕಾರಿ ಖಜಾನೆಯ ಹಗಲು ದರೋಡೆ, ಇಡೀ ಸರಕಾರವೇ ಜವಾಬ್ದಾರಿ ಹೊತ್ತು ರಾಜಿನಾಮೆ ಕೊಡಬೇಕು ಎಂದು ಹೇಳಿದರು.

ಇನ್ನು ಕಾರ್ಮಿಕ ಇಲಾಖೆಯ ಹಗರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾನದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಸಭೆ ಕರೆದು ಎಲ್ಲಾ ಮಾಹಿತಿ ನೀಡುವಂತೆ ಹೇಳಿದ್ದೇನೆ ಇದೆ ಬರುವ 12ನೇ ತಾರೀಕು ಸಭೆ ಇದ್ದು, ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದರು.

RELATED ARTICLES
- Advertisment -
Google search engine

Most Popular