ವರದಿ :ಸ್ಟೀಫನ್ ಜೇಮ್ಸ್.
ತಾಳಿಕೋಟಿ: ಸಾಧನೆ ಸಾಧಕನ ಸ್ವತ್ತು. ಸೋಮಾರಿಯ ಸ್ವತ್ತಲ್ಲ. ಸಾಧಿಸ ಬೇಕೆಂಬ ಛಲ ಇದ್ದರೆ ಯಾವುದೇ ಸಮಸ್ಯೆ. ಸವಾಲುಗಳು ನಮ್ಮನ್ನು ತಡೆಯುವುದಿಲ್ಲ. ಸಾಧಿಸಲೇಬೇಕೆಂಬ ಹಠ ಮತ್ತು ನಿರಂತರವಾದ ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುವು ದಕ್ಕೆ ಕರ್ನಾಟಕ ರಾಜ್ಯ ವೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡಾಪಟುಗಳ ಸಾಧನೆ ಉದಾರಣೆಯಾಗಿದೆ.
ನವೆಂಬರ್ 4ರಿಂದ 16ರ ವರೆಗೆ ಥೈಲ್ಯಾಂಡ್ ನ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ವೀಲ್ ಚೇರ್ ಬಾಸ್ಕೆಟ್‌ಬಾಲ್ ಏಷಿಯಾ ಒಷಿಯನ್ ನ್ ಚಾಂಪಿಯನ್ ಶಿಪ್ 2025 ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಕರ್ನಾಟಕ ರಾಜ್ಯದಿಂದ ನಾಲ್ಕು ಕ್ರೀಡಾಪಟುಗಳು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ತಂಡದ ನಾಯಕನಾದ ಬಸಪ್ಪ
ಸುನದೋಳಿ, ಸಿದ್ದಪ್ಪ ಪಟುಗುಂದಿ ಪುರುಷರ ತಂಡದಲ್ಲಿ ಆಯ್ಕೆಯಾದರೆ, ಲಲಿತಾ ಗವಸ್, ಲಕ್ಷ್ಮಿ ರಾಯಣ್ಣವರ್ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಯ್ಕೆಯಾಗಿದ್ದು ಹೇಗೆ?:
10ರ ವರೆಗೆ ನಡೆದ ರಾಷ್ಟ್ರೀಯ ವೀಲ್ ಚೇರ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ 2025ರಲ್ಲಿ ಕರ್ನಾಟಕ ಪುರುಷ ಮತ್ತು ಮಹಿಳಾ ತಂಡಗಳು ಉತ್ತಮ ಪ್ರದರ್ಶನ ನೀಡಿದ ಪುರುಷರ ತಂಡ ದ್ವಿತೀಯ ಸ್ಥಾನ ಮತ್ತು ಮಹಿಳಾ ತಂಡ ತೃತೀಯ ಸ್ಥಾನ ಪಡೆದುಕೊಂಡಿದ್ದವು. ಕರ್ನಾಟಕದಿಂದ ಈ ನಾಲ್ಕು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದರು. ಇದರ ಆಧಾರದ ಮೇಲೆ ಇವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ವೀಲ್‌ಚೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಕಾಂಚನ್ ಖೋತ್
ಹಜೇರಿ ಕಾರ್ಯದರ್ಶಿಯಾದ ಸಂಜೀವಕುಮಾರ್ ಹಾಗೂ ಸಂಸ್ಥೆಯ ಎಲ್ಲ ಸದಸ್ಯರು ಭಾರತ ತಂಡ ಪ್ರಥಮ ಸ್ಥಾನ ಗಳಿಸಿ ಬರಲಿ ಎಂದು ಹಾರೈಸಿದ್ದಾರೆ.



