ಮಂಡ್ಯ : ಎಲ್ಲಾ ಮುಗಿದ್ಮೆಲೆ ಪೋಸ್ ಕೊಡಕ್ ಬರ್ತೀವಿ ನಾವು ಎಂದು ವಿಸಿ ನಾಲೆಯಲ್ಲಿ ಕೊಚ್ಚಿ ಹೋದ ವಿಚಾರ ಕುರಿತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತಿಬ್ಬನಹಳ್ಳಿ ಬಳಿ ಇಂದು ವಿಸಿ ನಾಲೆಗೆ ಕಾರು ಉರುಳಿಬಿದ್ದು ಚಾಲಕ ನಾಪತ್ತೆ ಪ್ರಕರಣ ಸ್ಥಳಕ್ಕೆ ಭೇಟಿ ನೀಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇದೊಂದು ದುಃಖಕರ ಘಟನೆ. ಈ ಹಿಂದೆಯೂ ನಾಲೆಗೆ ಕಾರು ಬಿದ್ದಿತ್ತು. ಆಗ ಯಾರು ಸಾವನ್ನಪ್ಪಿರಲಿಲ್ಲ. ಆಗಲೇ ಇಂಜಿನಿಯರ್ ಬಳಿ ಮಾತನಾಡಿದ್ದೇವು. ಆಗ ಅಗ್ರಿಮೆಂಟ್ ಆಗಿರಲಿಲ್ಲ ಎನ್ನಲಾಗಿತ್ತು. ಈಗ ಶೀಘ್ರವೇ ತಡೆಗೋಡೆ ನಿರ್ಮಾಣ ಮಾಡಲು ತಿಳಿಸಿದ್ದೇನೆ ಎಂದರು.
ಎಲ್ಲಾ ಮುಗಿದ ಮೇಲೆ ನಾವು ಪೋಸ್ ಕೊಡಲು ಬರ್ತಿವಿ. ಸಮಸ್ಯೆ ಇದ್ದಾಗ ಯಾರು ಕೂಡ ಬಗೆ ಹರಿಸೋದಿಲ್ಲ. ರಸ್ತೆ ಮಾಡಿದ ಸಂದರ್ಭದಲ್ಲಿಯೇ ತಡೆಗೊಡೆ ನಿರ್ಮಿಸಬೇಕಿತ್ತು ಆದರೆ ನಿರ್ಮಿಸಿಲ್ಲ ಎಂದು ಬೇಸರಿಸಿದರು.
ಈ ಜಾಗದಲ್ಲಿ ನಾನು ಬರುವಾಗಲೇ ಎಷ್ಟೋ ಬಾರಿ ಅಪಘಾತವಾಗಬೇಕಿತ್ತು ಬಚಾವಾಗಿದ್ದೇನೆ ಎಂದ ಅವರು, ಆದಷ್ಟು ಬೇಗ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.