Tuesday, April 22, 2025
Google search engine

Homeರಾಜ್ಯಶ್ರೀ ರಾಮನನ್ನು ಬಿಜೆಪಿಯವರು ಯಾರು ಗುತ್ತಿಗೆ ತೆಗೆದುಕೊಂಡಿಲ್ಲ: ಸಚಿವ ಕೆ.ಎನ್ ರಾಜಣ್ಣ ಕಿಡಿ

ಶ್ರೀ ರಾಮನನ್ನು ಬಿಜೆಪಿಯವರು ಯಾರು ಗುತ್ತಿಗೆ ತೆಗೆದುಕೊಂಡಿಲ್ಲ: ಸಚಿವ ಕೆ.ಎನ್ ರಾಜಣ್ಣ ಕಿಡಿ

ತುಮಕೂರು :  ಶ್ರೀರಾಮ ಮಂದಿರ ಉದ್ಘಾಟನೆಯ ಆಹ್ವಾನ ನೀಡುವುದರಲ್ಲಿ ತಾರತಮ್ಯ ಆಗಿದೆ.  ನಿಜಕ್ಕೂ ಇದನ್ನು ಯಾರೂ ಸಹಿಸುವುದಕ್ಕೆ ಆಗುವುದಿಲ್ಲ. ಶ್ರೀ ರಾಮನನ್ನು ಬಿಜೆಪಿಯವರು ಯಾರು ಗುತ್ತಿಗೆ ತೆಗೆದುಕೊಂಡಿರುವುದಿಲ್ಲ. ಹಾಗೇನೆ ಹಿಂದುತ್ವವನ್ನು ಯಾವುದೇ ಪಕ್ಷಕ್ಕೂ ಗುತ್ತಿಗೆ ಕೊಟ್ಟಿಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು,  ರಾಜಕಾರಣಕೋಸ್ಕರ, ವೋಟಿಗೋಸ್ಕರ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಸರ್ಕಾರ ಅನ್ನೋದು ನಾವು ಖಂಡಿಸಬೇಕಾಗಿದೆ. ಹಿಂದುತ್ವವನ್ನ ಬಂಡವಾಳ ಮಾಡಿಕೊಂಡು ಬೇರೆ ಹಿಂದೂಗಳಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ರೀತಿಯ ಹಿಂದುತ್ವವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ನೋಡಿಯೇ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಹೋಗಿದ್ದು ಎಂದು ಹೇಳಿದರು.

ಹುಬ್ಬಳ್ಳಿ ಕರಸೇವಕನ ಬಂಧನ ಮಾಡಲು ಅವನ ಮೇಲಿನ ಕೇಸ್ ಗಳು ಕಾರಣ. ಹದಿಮೂರು ಕೇಸ್‌ ಗಳು ಆತನ ಮೇಲಿದೆ.  ಅವನೊಬ್ಬನನ್ನು ಬಂಧಿಸಿದ ತಕ್ಷಣ ಎಲ್ಲಾ ಕರಾಸೇವಕರನ್ನು ಬಂಧಿಸುತ್ತಾರೆ ಎನ್ನುವುದು ಸರಿ ಅಲ್ಲ. ಪೆಂಡಿಂಗ್ ಕೇಸುಗಳನ್ನು ಪರಿಶೀಲನೆ ಮಾಡುವ ವೇಳೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಹಿಂದೂಗಳೊಬ್ಬರಿಂದಲೇ ದೇಶ ಕಟ್ಟಲು ಆಗುವುದಿಲ್ಲ. ಎಲ್ಲಾ ಧರ್ಮದ ಜನರನ್ನ ಸೇರಿಸಿಕೊಂಡು ದೇಶ ಕಟ್ಟಿರುವುದು. ಈಗ ಪ್ರಸ್ತುತ ಇರುವ ರಾಕೇಟ್ ಟೆಕ್ನಾಲಜಿ ಟಿಪ್ಪು ಟೆಕ್ನಾಲಜಿ ಅಂತಾನೆ ಫೇಮಸ್ ಆಗಿದೆ. ಟಿಪ್ಪುವಿನಿಂದಾಗಿ ರಾಕೇಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದೇವೆ. ಅಬ್ದುಲ್ ಕಲಾಂ ಕೂಡ ರಾಕೇಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದಾರೆ.  ಗಾಂಧೀಜಿ ಕೊಂದ ಗೋಡ್ಸೆನೂ ಕೂಡ ಹಿಂದೂನೇ, ಶ್ರೀರಾಮನ ಜಪ ಮಾಡುತ್ತಿದ್ದ ಗಾಂಧಿನ ಗೋಡ್ಸೆ ಕೊಂದ. ಮೋದಿ ಹೋಗಿ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿದ ತಕ್ಷಣ ನಾವೆಲ್ಲನಮ್ಮ ಊರಿನ ರಾಮನನ್ನು ಬಿಟ್ಟು ಅಲ್ಲಿಗೆ ಹೋಗಲ್ಲ ಎಂದರು.

ಬಿಜೆಪಿಯವರ ಶ್ರೀರಾಮ ಎಂದು ಬರೆದುಕೊಳ್ಳಲಿ ನಮಗೇನೂ ಅಡ್ಡಿಯಿಲ್ಲ. ಶ್ರೀ ರಾಮನನ್ನು ಪರಿಚಯಿಸಿದಂತಹ ವಾಲ್ಮೀಕಿಯ ದೇವಸ್ಥಾನ ಕಟ್ಟಬೇಕೆಂದು ಒತ್ತಾಯ ಮಾಡುತ್ತೇವೆ. ಈ ಒತ್ತಾಯಕ್ಕೆ ಮೋದಿ ಅವರು ಸ್ಪಂದಿಸಬೇಕು. ಇಲ್ಲದಿದ್ದರೆ ಇಡೀ ದೇಶದಲ್ಲಿ ಹೋರಾಟ ಮಾಡುತ್ತೇವೆ  ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಹೆಚ್. ಆಂಜನೇಯ ಅವರ ನಂಬಿಕೆ ಮೇಲೆ ಸಿದ್ದರಾಮಯ್ಯ ಅವರನ್ನು ರಾಮ ಅಂದಿದ್ದಾರೆ.  ಗೋಡ್ಸೆ ಹಿಂದೂಗಳು ಮತ್ತು ಮಹಾತ್ಮ ಗಾಂಧಿ ಹಿಂದೂಗಳು ಎಂದು ನಾವು ಬದಲಾವಣೆ ಮಾಡಬೇಕಾಗುತ್ತದೆ. ಮಹಾತ್ಮ ಗಾಂಧಿ ಅವರ ಪ್ರತಿಪಾದನೆಯ ಹಿಂದುತ್ವ ಬೇರೆ. ಗೋಡ್ಸೆ ಹಿಂದುತ್ವ ಬೇರೆ. ನಾವೆಲ್ಲ ಮಹಾತ್ಮ ಗಾಂಧಿ ಅವರ ಹಿಂದುತ್ವದ ಪ್ರತಿಪಾದಕರು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular