ಹೈದರಾಬಾದ್: ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೂ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಆರ್ ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಕ್ರಮಕೈಗೊಂಡ ಆಯೋಗ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು ಅಸಮಾಧಾನ ಹೊರಹಾಕಿದರು. ೪೮ ಗಂಟೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನನಗೆ ಸೂಚಿಸಲಾಗಿದೆ. ಆದರೆ ಬಿಆರ್‌ಆರ್‌ಎಸ್ ಕಾರ್ಯಕರ್ತರು ೯೬ ಗಂಟೆಗಳ ಕಾಲ ಅವಿರತವಾಗಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.
ರೇವಂತ್ ರೆಡ್ಡಿ ವಿರುದ್ಧ ಕ್ರಮವಿಲ್ಲ ಯಾಕೆ: ಕೆ. ಚಂದ್ರಶೇಖರ ರಾವ್ ಆರೋಪ
RELATED ARTICLES