ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿದ ೭೨ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ಇಪ್ರಕ್ಯೂಟ್‌ಮೆಂಟ್ ಮೂಲಕ ಹರಾಜು ಮಾಡುವಾಗ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರುದ್ರೇಶ್ ಬೆಂಬಲಿಗರೊಡನೆ ಪ್ರತಿಭಟನೆ ನಡೆಸಿದರು.
ಫೆ.೨೧ರಿಂದ ಇಪ್ರಕ್ಯೂಟ್‌ಮೆಂಟ್ ಮೂಲಕ ಟೆಂಡರ್ ಪ್ರಕ್ರಿಯೆ ಆರಂಭಿಸಿ ೨೭ಕ್ಕೆ ಅಂತಿಮಗೊAಡ ನಂತರ ೨೯ರಂದು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಳಿಗೆ ಪಡೆದವರಿಗೆ ನೋಂದಣಿ ಮಾಡಿದೆ ಆಕ್ರಮವೆಸಗಿ ಈ ಹಿಂದೆ ಇದ್ದವರಿಗೆ ಗುಟ್ಟಾಗಿ ನೀಡುತ್ತಿದ್ದಾರೆ ಎಂದು ವಿಷದ ಬಾಟಲಿ ಹಿಡಿದು ಪುರಸಭೆ ಮುಂದೆ ಧರಣಿ ನಡೆಸಿದರು.
ಕಳೆದ ಮೂರು ದಿನಗಳಿಂದ ಕೆಲ ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿಗಳ ಜೊತೆಗೂಡಿ ಹಣ ಪಡೆದು ಹೊಸದಾಗಿ ಹರಾಜಿನಲ್ಲಿ ಮಳಿಗೆ ಪಡೆದುಕೊಂಡವರಿಗೆ ಅನ್ಯಾಯ ಮಾಡಿ ಒಳಗೊಳಗೆ ಗುಟ್ಟಾಗಿ ನೋಂದಣಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಎಸ್.ರುದ್ರೇಶ್ ಅವರು ವಿಷದ ಬಾಟಲಿ ಹಿಡಿದು ಪುರಸಭೆ ಮುಂದೆ ಪ್ರತಿಭಟನೆ ವಿಚಾರ ತಿಳಿದ ಪೊಲೀಸ್ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತರ ಮನವೊಲಿಸಿ ವಿಷದ ಬಾಟಲಿ ಕಿತ್ತುಕೊಂಡು ಪ್ರತಿಭಟನೆ ನಡೆಸುವಾಗಿ ಸೌಹಾರ್ದಯುತ್ತವಾಗಿ ಮಾಡಬೇಕು ಇಂತಹ ಕೆಲಸ ಮಾಡಬಾರದು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾ ನಿರತ ಕೆ.ಎಸ್.ರುದ್ರೇಶ್ ಅಧಿಕಾರಿಗಳು ಇಲ್ಲದ ನಿಯಮದ ನೆಪ ಹೇಳಿಕೊಂಡು ಲಕ್ಷಾಂತರ ರೂಗಳ ಠೇವಣಿ ಹಣ ಕಟ್ಟಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವವರಿಗೆ ಅನ್ಯಾಯ ಮಾಡುತ್ತಿದ್ದು ಇದನ್ನು ಕೂಡಲೇ ಸರಿಪಡಿಸದಿದ್ದರೆ ನಾಳೆಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ೩೦ ವರ್ಷಗಳಿಂದ ಈವರೆಗೆ ಇದ್ದ ವ್ಯಾಪಾರಿಗಳೇ ಮಳಿಗೆಯಲ್ಲಿದ್ದು ಹೊಸಬರಿಗೆ ಅವಕಾಶ ದೊರಕುತ್ತಿಲ್ಲ ಇದರಿಂದ ನಮಗೆ ತೊಂದರೆಯಾಗುವುದರ ಜತೆಗೆ ಸರ್ಕಾರದ ನಿಯಮಗಳು ಪಾಲನೆಯಾಗದ್ದರಿಂದ ಸಂಬoಧಿತ ಇಲಾಖೆಯ ಸಚಿವರು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ನಗರ ಪಟ್ಟಣದ ಪುರಸಭೆಯಲ್ಲಿ ವಾಣಿಜ್ಯ ಮಳಿಗೆಗಳ ಹರಾಜು ಸಂಬoಧ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಾವುಗಳು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಮೂರು ದಿನಗಳ ಹಿಂದೆಯೇ ಲಿಖಿತವಾಗಿ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಅಕ್ರಮವನ್ನು ತಡೆಗಟ್ಟಿ ಸಮಸ್ಯೆ ಪರಿಹರಿಸದಿದ್ದರೆ ನ್ಯಾಯಾಲಯದ ಮೋರೆ ಹೋಗುವುದಾಗಿ ತಿಳಿಸಿದರು.
ತಹಶೀಲ್ದಾರ್ ಭೇಟಿ : ಪುರಸಭೆ ಮುಂದೆ ವಾಣಿಜ್ಯ ಮಳಿಗೆ ಹರಾಜಿನಲ್ಲಿ ಪಾಲ್ಗೊಂಡಿದ್ದವರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದ ಸಾಲಿಗ್ರಾಮ ತಹಶೀಲ್ದಾರ್ ನರಗುಂದ್ ಮತ್ತು ಕೆ.ಆರ್.ನಗರ ಗ್ರೇಡ್-೨ ತಹಶೀಲ್ದಾರ್ ಬಾಲಸುಬ್ರಮಣ್ಯ ಭೇಟಿ ನೀಡಿ ಪ್ರತಿಭಟನಾ ನಿರತರ ಅಹವಾಲು ಆಲಿಸಿ ಮನವಿ ಪತ್ರ ಸ್ವೀಕರಿಸಿದರು. ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಚಿರಾಗ್‌ಪಟೇಲ್, ಅಮೃತ್‌ಗೌಡ, ಪ್ರದೀಪ್, ಸೈಯದ್‌ಜವಾದ್, ಕೃತಿಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.