Thursday, April 17, 2025
Google search engine

Homeಅಪರಾಧಪತಿಯಿಂದಲೇ ಪತ್ನಿಯ ಕೊಲೆ ಶಂಕೆ: 20 ದಿನಗಳ ನಂತರ ಹೂತಿದ್ದ ಶವ ಹೊರತೆಗೆಯುತ್ತಿರುವ ಅಧಿಕಾರಿಗಳು

ಪತಿಯಿಂದಲೇ ಪತ್ನಿಯ ಕೊಲೆ ಶಂಕೆ: 20 ದಿನಗಳ ನಂತರ ಹೂತಿದ್ದ ಶವ ಹೊರತೆಗೆಯುತ್ತಿರುವ ಅಧಿಕಾರಿಗಳು

ತುಮಕೂರು: ಪತಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆಂಬ ಪೋಷಕರ ದೂರಿನ ಹಿನ್ನಲೆ 20 ದಿನಗಳ ನಂತರ ಹೂತಿದ್ದ ಶವವನ್ನು ಅಧಿಕಾರಿಗಳ ಹೊರತೆಗೆದಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಇದೇ ತಿಂಗಳು 2ನೇ ತಾರೀಖಿನಿಂದು ಶೆಟ್ಟಿಹಳ್ಳಿ ನಿವಾಸಿ ವರ್ಷಿಣಿ ಸಾವನ್ನಪ್ಪಿದ್ದು, ಈ ವೇಳೆ ಹೆತ್ತವರಿಗೂ ತಿಳಿಸದೇ ಪತ್ನಿಯನ್ನು ಪತಿ ಪತಿ ಚೇತನ್ ಮಣ್ಣು ಮಾಡಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರಿಂದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.

2008ರಲ್ಲಿ ಚೇತನ್ ನೊಂದಿಗೆ ವರ್ಷಿಣಿ ಮದುವೆಯಾಗಿತ್ತು. ಮೂರು ಮಕ್ಕಳನ್ನು ದಂಪತಿ ಹೊಂದಿದ್ದರು.

ಚೇತನ್ ಪತ್ನಿಯನ್ನು ಅನುಮಾನಿಸುತ್ತಿದ್ದು, ಮದುವೆಯಾಗಿದ್ದಾಗಿನಿಂದಲೂ ಅಕೆಯನ್ನು ಮನೆಯಲ್ಲೇ ಬಂಧಿಸಿಟ್ಟಿದ್ದ. ಆಗಾಗ ವರದಕ್ಷಿಣೆ ಕಿರುಕುಳವನ್ನು ಕೂಡ ನೀಡುತ್ತಿದ್ದ. ಹೀಗಾಗಿ ಅವನೇ ಹೆಂಡತಿಯನ್ನು ಕೊಲೆ ಮಾಡಿ ಮಣ್ಣು ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಹೆತ್ತವರ ದೂರಿನ ಹಿನ್ನೆಲೆ ತುಮಕೂರು ಎಸಿ ನೇತೃತ್ವದಲ್ಲಿ ಶವವನ್ನು ಹೊರತೆಗೆಯಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ.

ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular