ಹನೂರು: ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಕಾಡು ಹಂದಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ. ಹನೂರು ತಾಲೂಕಿನ ಕೆ.ಕೆ ಡ್ಯಾಮ್ ನ ನಿವಾಸಿಗಳಾದ ಶಿವಣ್ಣ, ಮಾದೇವಮ್ಮ, ಬಸಮ್ಮ ಗಾಯಗೊಂಡವರಾಗಿದ್ದಾರೆ. ಕಾರ್ಯನಿಮಿತ್ತ ಪಟ್ಟಣಕ್ಕೆ ಬಂದು ಮತ್ತೆ ಸ್ವ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಆಂಡಿ ಪಾಳ್ಯ ಗ್ರಾಮದ ತಿರುವಿನಲ್ಲಿ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ಮೂವರು ಬೈಕ್ ನಿಂದ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ದಾರಿಹೋಕರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿ ಸಹಕಾರಿಯಾಗಿದ್ದಾರೆ.