ಮಂಡ್ಯ: ಚುನಾವಣೆಯಲ್ಲಿ ಚಲುವರಾಯಸ್ವಾಮಿ ನನ್ನ ಪ್ರತಿಸ್ಪರ್ಧಿಯಾಗಿ ನಿಂತು ಗೆಲ್ಲಲಿ ಎಂಬ ಮಾಜಿ ಶಾಸಕ ಸುರೇಶ್ ಗೌಡ ರವರ ಚಾಲೆಂಜ್ ವಿಚಾರವಾಗಿ ಇಂದು ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ‘ಜೆಡಿಎಸ್ ನ ಪ್ರಬಲ ಅಭ್ಯರ್ಥಿ ಸುರೇಶ್ ಗೌಡ.’ಅವರ ವಿರುದ್ದ ಗೆಲ್ಲೋಕೆ ಆಗುತ್ತಾ? ಎಲ್ಲಾದ್ರೂ ಉಂಟಾ?.ಸುರೇಶ್ ಗೌಡ್ರು ಕ್ಯಾಂಡೆಟ್ ಆದ್ರೆ ನಾವು ಅಭ್ಯರ್ಥಿ ಹುಡುಕುವುದು ಕಷ್ಟ.’
ಬಹುಶಃ ಇವತ್ತು ಜೆಡಿಎಸ್ ಗೆ ಬಹಳ ಪ್ರಬಲವಾದ ಕ್ಯಾಂಡೆಟ್ ಅವರು.ಅವರೇ ಅಭ್ಯರ್ಥಿ ಆದ್ರೆ, ನಾವು ಏನು ಮಾಡೋದು ಅಂತ ಯೋಚನೆ ಮಾಡ್ತಿದ್ದೇವೆ.ಇನ್ನು ನಾವು ತೀರ್ಮಾನಕ್ಕೆ ಬಂದಿಲ್ಲ.ಬೇರೆಯವರು ಯಾರಾದ್ರು ಆದ್ರೆ ಸುಲಭವಾಗಿ ಕ್ಯಾಂಡೆಟ್ ಹಾಕ್ತೇವೆ.ಸುರೇಶ್ ಗೌಡ ಏನಾದ್ರು ಅಭ್ಯರ್ಥಿ ಆದ್ರೆ ಸ್ವಲ್ಪ ನಾವು ಯೋಚನೆ ಮಾಡಬೇಕು.ಯೋಚನೆ ಮಾಡ್ತೇವೆ.ನಾವು ಅಭ್ಯರ್ಥಿ ಹುಡುಕುವುದೇ ಕಷ್ಟವಾಗುತ್ತೆ ಎಂದು ಸುರೇಶ್ ಗೌಡರ ವಿರುದ್ದ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ನಂತರ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ಮೈತ್ರಿ ಮಾಡಿಕೊಳ್ಳುತ್ತಿರೋ ಜೆಡಿಎಸ್‌ಗೆ ಒಳ್ಳೆಯದಾಗಲಿ.50-50, 40-50, 30-70 ಎಷ್ಟಾದ್ರು ನಮಗೆ ಸಂತೋಷ.ನಮಗೆ ಯಾವುದೇ ದ್ವೇಷ ಇಲ್ಲ.ಜೆಡಿಎಸ್ ಅವರು ನಮ್ಮ ಹಳೆಯ ಸ್ನೇಹಿತರು.ಬಿಜೆಪಿ ಅವರು ಅವರಿಗೆ ಅವಕಾಶ ಕೊಟ್ಟಿದ್ದಾರೆ ಅಂದ್ರೆ ಖುಷಿಪಡುತ್ತೇವೆ.ಬಿಜೆಪಿ ಯಡಿಯೂರಪ್ಪ ಅವರ ಜೊತೆ ಹಿಂದೆ ಜೆಡಿಎಸ್ ಇದ್ದು ಬಂದಿದ್ದು ಗೊತ್ತಿದೆ.ಕಾಂಗ್ರೆಸ್ ಧರ್ಮಸಿಂಗ್ ಜೊತೆ ಇದ್ದು ಬಂದಿದ್ದು ಗೊತ್ತಿದೆ.ಮೈತ್ರಿ ಧರ್ಮನಾ ಬಹಳ ಚನ್ನಾಗಿ ರಾಷ್ಟ್ರೀಯದಲ್ಲಿ ಎಲ್ಲರಿಗಿಂತ ನಡೆಸೋದು ಜೆಡಿಎಸ್.ಮೈತ್ರಿ ಧರ್ಮನ ಜೆಡಿಎಸ್ ಕರೆಕ್ಟ್ ಆಗಿ ನಡೆಸುತ್ತಾರೆ.ಕಾಂಗ್ರೆಸ್ ನವರು ನಮಗೆ ಅನ್ಯಾಯ ಮಾಡಿದ್ದಾರೆ ಅಂತಾ ಅವರು ಹೇಳ್ತಾರೆ.ಜೆಡಿಎಸ್ ಮತ್ತು ಕುಮಾರಸ್ವಾಮಿ ಮಾತ್ರ ಮೈತ್ರಿ ಧರ್ಮ ಪಾಲಕರು ಎಂದು ವಿಡಂಬನೆ ಮಾಡಿದರು.
ದೆಹಲಿಯಲ್ಲಿ ಪ್ರಧಾನಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಪ್ರಧಾನಿಗಳೊಂದಿಗೆ ಮಾತಾಡಿದ್ದೇವೆ.ಬರ ಪ್ರಮುಖ ವಿಚಾರ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ.ಆದಷ್ಟು ಬೇಗ ಬರ ಪರಿಹಾರ ನೀಡುವಂತೆ ಕೇಳಿದ್ದೇವೆ.ಒಕ್ಕೂಟದ ವ್ಯವಸ್ಥೆಯಲ್ಲಿ ಇರೋ ಕಾರಣ ಅವರಿಂದ ನಮಗೆ ನಿರೀಕ್ಷೆ ಇದೆ.ಬರ ಪರಿಹಾರ ಎಷ್ಟು ಕೊಡ್ತಾರೆ ಎಂದು ನೋಡಬೇಕು.ನಮ್ಮ ಪರಿಸ್ಥಿತಿಯನ್ನು ವಿವರವಾಗಿ ಹೇಳಿದ್ದೇವೆ ಎಂದರು. ಕೆಆರ್‌ಎಸ್‌ನಿಂದ ನದಿಗೆ ಒಂದು ಕ್ಯೂಸೆಕ್ ನೀರು ಬಿಡುಗಡೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ,
ನದಿಯ ಮಧ್ಯ ಪ್ರಾಣಿಗಳು, ಪಕ್ಷಿಗಳಿಗೆ ನೀರು ಬೇಕಾಗುತ್ತದೆ.ಅದಕ್ಕೆ ಒಂದು ಸಾವಿರ ಕ್ಯೂಸೆಕ್ ಬಿಡಿ ಎಂದು ಹೇಳಿದ್ದಾರೆ.ಆಗಿದ್ರೂ ನಾವು ನೀರು ಬಿಟ್ಟಿಲ್ಲ, ಸೀಪೇಜ್ ವಾಟರ್ ಹೋಗ್ತಾ ಇದೆ.ನಾಲೆಗಳಿಗೆ ನೀರು ಬಿಡುವ ಬಗ್ಗೆ ನಾಳೆ ಸಭೆ ಇದೆ.ಸಭೆಯಲ್ಲಿ ತೀರ್ಮಾನ ಮಾಡ್ತೀವಿ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರವಾಗಿ ,ಇದರಲ್ಲಿ ಯಾವುದೇ ಗೊಂದಲವಿಲ್ಲ.ಇವತ್ತು ಅಥವಾ ನಾಳೆ ಘೋಷಣೆ ಆಗುತ್ತೆ ಎಂದರು.