ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ
ನವದೆಹಲಿ: ಏರ್ ಇಂಡಿಯಾ ಹಾಗೂ ವಿಸ್ತಾರ ವಿಮಾನಯಾನ ಸಂಸ್ಥೆಗಳ ವಿಲೀನದ ಬಳಿಕ ಮೊದಲ ವಿಮಾನ ಹಾರಾಟಗೊಂಡಿದೆ.
ಎ12286 ಕೋಡ್‌ನೊಂದಿಗೆ ಕಾರ್ಯನಿರ್ವಹಿಸುವ ವಿಮಾನವು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 10:07ಕ್ಕೆ ಕತಾರ್‌ನ ದೋಹಾದಿಂದ ಮುಂಬೈಗೆ ಹೊರಟಿದ್ದು, ಮಂಗಳವಾರ ಬೆಳಿಗ್ಗೆ ಮುಂಬೈಗೆ ತಲುಪಲಿದೆ. ಟಾಟಾ ಗ್ರೂಪ್ಸ್‌ನ ಭಾಗವಾಗಿರುವ ಎರಡು ಸಂಸ್ಥೆಗಳು ವಿಲೀನಗೊಂಡಿದ್ದು, ವಿಲೀನವಾದ ಬಳಿಕ ಮೊದಲ ಅಂತರರಾಷ್ಟ್ರೀಯ ವಿಮಾನ ಹಾರಾಟಗೊಂಡಿದೆ.
ಇನ್ನೂ ಭಾರತದಲ್ಲಿ ಮಂಗಳವಾರ ನಸುಕಿನ ಜಾವ 01:30 ಗಂಟೆಗೆ ಮುಂಬೈನಿಂದ ದೆಹಲಿಗೆ ಮೊದಲ ವಿಮಾನ ಹಾರಾಟಗೊಂಡಿದೆ.
ವಿಲೀನದ ನಂತರ ಏರ್ ಇಂಡಿಯಾ ನಿರ್ವಹಿಸುತ್ತಿರುವ ವಿಸ್ತಾರ ವಿಮಾನಗಳಿಗಾಗಿ ‘ಎ12ಎಕ್ಸ್ಎಕ್ಸ್ಎಕ್ಸ್’ ಕೋಡ್‌ನ್ನು ಬಳಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಬುಕ್ಕಿಂಗ್ ಸಮಯದಲ್ಲಿ ವಿಸ್ತಾರ ವಿಮಾನವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಟಾಟಾ ಗ್ರೂಪ್‌ನ ಭಾಗವಾಗಿರುವ ಎರಡೂ ವಿಮಾಯಾನ ಸಂಸ್ಥೆಗಳ ವಿಲೀನವು ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಬಲವರ್ಧನೆಯನ್ನು ಸೂಚಿಸುತ್ತದೆ. ವಿಸ್ತಾರ ಇದು ಟಾಟಾಸ್ ಮತ್ತು ಸಿಂಗಾಪುರ್ ಏರಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದ್ದು, ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರಲೈನ್ಸ್ ಏರ್ ಇಂಡಿಯಾದ 25.1 ಶೇಕಡಾ ಪಾಲನ್ನು ಪಡೆಯುತ್ತದೆ.