ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೋರ್ವರಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು, ಬಸ್ ಚಾಲಕ ಬಸ್ಸನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ತಂದ ಘಟನೆ ರವಿವಾರ ನಡೆದಿರುವುದು ವರದಿಯಾಗಿದೆ.
ಮೈಸೂರು ಮೂಲದ ಶೋಭಾ ಎಂಬವರು ಬಸ್‌ನಲ್ಲಿ ನಿರಂತರ ವಾಂತಿ ಮಾಡಿದ ಪರಿಣಾಮ ಪ್ರಜ್ಞೆ ತಪ್ಪುವ ಸ್ಥಿತಿಗೆ ಬಂದಿದ್ದರೆನ್ನಲಾಗಿದೆ. ಸುಳ್ಯದ ಹತ್ತಿರ ತಲುಪುವಾಗ ಮಹಿಳೆ ಗಂಭೀರ ಸ್ಥಿತಿ ಗೆ ತಲುಪಿದ್ದರು. ಇದನ್ನು ಗಮನಿಸಿದ ಬಸ್ ಚಾಲಕ ಬಸ್ಸನ್ನು ನೇರ ಕೆವಿಜಿ ಆಸ್ಪತ್ರೆಗೆ ತಂದು ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಚಾಲಕರ ಮಾನವೀಯ ಸೇವೆಗೆ ಪ್ರಶಂಸೆ ವ್ಯಕ್ತವಾಗಿದೆ.